ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಮನೆ ಆವರಣಕ್ಕೆ ಬಂದ ಜಿಂಕೆಯೊಂದನ್ನು ಪೊಲೀಸ್ ಸಿಬ್ಬಂದಿ ಮಲ್ಲೇಶ್‌ನಾಯ್ಕ್ಕ ಅವರು ರಕ್ಷಿಸಿರುವುದು.
ಭದ್ರಾವತಿ, ಜು. ೬; ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಮನೆ ಆವರಣಕ್ಕೆ ಬಂದ ಜಿಂಕೆಯೊಂದನ್ನು ಪೊಲೀಸ್ ಸಿಬ್ಬಂದಿಯೊಬ್ಬರು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿರುವ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ನಿವಾಸಿ, ಪೊಲೀಸ್ ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲೇಶ್‌ನಾಯ್ಕ ಅವರ ಮನೆ ಆವರಣಕ್ಕೆ ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಜಿಂಕೆಯೊಂದು ಬಂದಿದ್ದು, ತಕ್ಷಣ ಮಲ್ಲೇಶ್‌ನಾಯ್ಕ ಅವರು ಅದನ್ನು ರಕ್ಷಿಸಿ ಉಂಬ್ಳೆಬೈಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜಿಂಕೆಯನ್ನು ಪುನಃ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
No comments:
Post a Comment