ಸಮಾಜಸೇವಕ ಇಬ್ರಾಹಿಂಖಾನ್ ಮನವಿ
ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಅದರಲ್ಲೂ ಕಂಚಿ ಬಾಗಿಲು ಸಮೀಪ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ವೇಗ ನಿಯಂತ್ರಕ(ಹಂಪ್ಸ್) ಅಳವಡಿಸುವಂತೆ ಸಮಾಜ ಸೇವಕ ಇಬ್ರಾಹಿಂ ಖಾನ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಭದ್ರಾವತಿ, ಆ. ೨: ಇತ್ತೀಚೆಗೆ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಅದರಲ್ಲೂ ಕಂಚಿ ಬಾಗಿಲು ಸಮೀಪ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ವೇಗ ನಿಯಂತ್ರಕ(ಹಂಪ್ಸ್) ಅಳವಡಿಸುವಂತೆ ಸಮಾಜ ಸೇವಕ ಇಬ್ರಾಹಿಂ ಖಾನ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಕಂಚಿ ಬಾಗಿಲು ಸಮೀಪ ಪೊಲೀಸ್ ವಸತಿ ಸಮುಚ್ಛಯ, ಆಲ್ ಮಹಮೂದ್ ವಿದ್ಯಾಸಂಸ್ಥೆ, ದರ್ಗಾ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಇದ್ದು, ತಾಲೂಕು ಕಛೇರಿ ರಸ್ತೆಗೆ ಸಂಪರ್ಕಗೊಂಡಿದೆ. ಈ ಭಾಗದಲ್ಲಿ ವಾಹನಗಳ ದಟ್ಟಣೆ ಹಾಗು ಪಾದಚಾರಿಗಳ ಸಂಚಾರ ಅಧಿಕವಾಗಿದ್ದು, ಇತ್ತೀಚೆಗೆ ಸಿಮೆಂಟ್ ರಸ್ತೆ ನಿರ್ಮಾಣಗೊಂಡ ನಂತರ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇದರಿಂದಾಗಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನದ ಬಳಿ ಹಾಗು ಕಿಟ್ಟಮ್ಮ ಹಿಟ್ಟಿನ ಗಿರಣಿ ಸಮೀಪ ವೇಗ ನಿಯಂತ್ರಕ ಅಳವಡಿಸುವ ಮೂಲಕ ಸಾರ್ವಜನಿಕರ ಜೀವ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ನಗರಸಭೆ ಪೌರಾಯುಕ್ತ ಮನುಕುಮಾರ್ ಹಾಗು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರಿಗೆ ಇಬ್ರಾಹಿಂ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ.
No comments:
Post a Comment