Saturday, August 6, 2022

ಪರಿಷತ್ ಸದಸ್ಯರ ಅನುದಾನದಲ್ಲಿ ವಿಕಲಚೇತನ ವೆಂಕಟೇಶ್‌ಗೆ ದ್ವಿಚಕ್ರ ವಾಹನ ವಿತರಣೆ

ಭದ್ರಾವತಿ ಹಳೇನಗರದ ರಥಬೀದಿ ನಿವಾಸಿ, ವಿಕಲಚೇತನ ಟಿ.ವಿ ವೆಂಕಟೇಶ್ ಅವರಿಗೆ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ದ್ವಿಚಕ್ರ ವಾಹನ ವಿತರಿಸಲಾಯಿತು.
    ಭದ್ರಾವತಿ, ಆ. ೬: ಹಳೇನಗರದ ರಥಬೀದಿ ನಿವಾಸಿ, ವಿಕಲಚೇತನ ಟಿ.ವಿ ವೆಂಕಟೇಶ್ ಅವರಿಗೆ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ದ್ವಿಚಕ್ರ ವಾಹನ ವಿತರಿಸಲಾಯಿತು.
    ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ತಮ್ಮ ಅನುದಾನದಲ್ಲಿ ಮಂಜೂರಾದ ದ್ವಿಚಕ್ರ ವಾಹನವನ್ನು ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸುವ ಮೂಲಕ ಟಿ.ವಿ ವೆಂಕಟೇಶ್ ಅವರ ಸಂಕಷ್ಟಕ್ಕೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ವಿಕಲಚೇತನ ವೆಂಕಟೇಶ್ ಮಾತನಾಡಿ, ಸಂಕಷ್ಟಕ್ಕೆ ಸ್ಪಂದಿಸಿರುವುದು ತುಂಬಾ ಸಂತಸವನ್ನುಂಟು ಮಾಡಿದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪಕ್ಷದ ಮುಖಂಡರಾದ ನಗರಸಭಾ ಸದಸ್ಯರಾದ ಅನುಪಮಾ, ಕರೀಗೌಡ, ಚನ್ನೇಶ್, ಮಂಗೋಟೆ ರುದ್ರೇಶ್. ಜಿ. ಆನಂದ್‌ಕುಮಾರ್, ವಿಶ್ವನಾಥ ಕೋಠಿ, ಚಂದ್ರು, ರವಿಕುಮಾರ್, ಸುಬ್ರಮಣಿ, ಮಂಜುನಾಥ್, ಪ್ರಭುರಾವ್, ಬಿ.ಆರ್ ಸಚ್ಚಿದಾನಂದ, ವಿಜಯ್, ಮಂಜುಳ,  ಶಕುಂತಲ, ಹೇಮಾ ನಿತ್ಯಾನಂದ, ಸಿಂಧೂ ಸುರೇಶ್, ಕವಿತಾ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment