ಭದ್ರಾವತಿಯಲ್ಲಿ ಜೈನ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರು ಮತ್ತು ಬೈಕ್ ಜಾಥಾ ಕಾರ್ಯಕ್ರಮಕ್ಕೆ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಮತ್ತು ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಹಾಗು ಜೈನ ಸಮಾಜದ ಪ್ರಮುಖರು ಚಾಲನೆ ನೀಡಿದರು.
ಭದ್ರಾವತಿ, ಅ. ೧೩: ೭೫ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಶನಿವಾರ ನಗರದ ಜೈನ ಸಮಾಜದವರು ಕಾರು ಮತ್ತು ಬೈಕ್ ಜಾಥಾ ನಡೆಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನ ಕುರಿತು ಜಾಗೃತಿ ಮೂಡಿಸಿದರು.
ಹಳೇನಗರದ ಕನಕ ಮಂಟಪ ಮೈದಾನದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಮತ್ತು ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಹಾಗು ಜೈನ ಸಮಾಜದ ಪ್ರಮುಖರು ಚಾಲನೆ ನೀಡಿದರು.
ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಸರ್ದಾರ್ ವಲ್ಲಭಾಯ್ ಪಟೇಲ್, ಲಾಲ ಲಜಪತ್ ರಾಯ್, ಬಿಪಿನ್ ಚಂದ್ರಪಾಲ್, ಬಾಲಗಂಗಾಧರನಾಥ ತಿಲಕ್, ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಸರ್ದಾರ್ ವಲ್ಲಭಾಯ್ ಪಟೇಲ್, ಲಾಲ ಲಜಪತ್ ರಾಯ್, ಬಿಪಿನ್ ಚಂದ್ರ ಪಾಲ್. ಬಾಲಗಂಗಾಧರ ತಿಲಕ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಹುತಾತ್ಮ ವೀರ ಸೈನಿಕ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರು, ವೀರಾ ಸೇನಾನಿಗಳ, ಮಹಾಪುರುಷರ ಭಾವಚಿತ್ರಗಳೊಂದಿಗೆ ರಾಷ್ಟ್ರ ಧ್ವಜ ಹಿಡಿದು ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಜಾಥಾ ತಾಲೂಕು ಕಚೇರಿ ರಸ್ತೆ, ಸಿ.ಎನ್ ರಸ್ತೆ, ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್, ಹುತ್ತಾ ಬಸ್ ನಿಲ್ದಾಣದವರೆಗೆ ಸಾಗಿ ಪುನಃ ಹಿಂದಿರುಗಿ ಮಾಧವಚಾರ್ ವೃತ್ತದ ಮೂಲಕ ಜೈನ ಮಂದಿರ ತಲುಪಿತು. ಜಾಥಾದಲ್ಲಿ ಸುಮಾರು ೭೫ ಕಾರು ಹಾಗು ೨೦೦ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಾಗವಹಿಸಿದ್ದವು.
ಜೈನ ಸಮಾಜದ ಸಂಪತ್‌ರಾಜ್ ಬಾಂಟಿಯ, ಸಂದೇಶ್, ಜಿತೇಂದರ್, ಹಿತೇಶ್, ಗೌತಮ್, ಸುರೇಶ್‌ಕುಮಾರ್, ಮುಖೇಶ್, ಶೈಲೇಂದ್ರ, ರಾಹುಲ್ ಸವಾಯ್, ಪ್ರವೀಣ್ ಸೇರಿದಂತೆ ಇನ್ನಿತರರು ಜಾಥಾ ನೇತೃತ್ವ ವಹಿಸಿದ್ದರು.
೭೫ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಶನಿವಾರ ಭದ್ರಾವತಿಯಲ್ಲಿ ಜೈನ ಸಮಾಜದವರು ಕಾರು ಮತ್ತು ಬೈಕ್ ಜಾಥಾ ನಡೆಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನ ಕುರಿತು ಜಾಗೃತಿ ಮೂಡಿಸಿದರು.
No comments:
Post a Comment