Sunday, September 4, 2022

ಭೋವಿ ಕಾಲೋನಿ ಗಣಪತಿ ವಿಜೃಂಭಣೆ ರಾಜಬೀದಿ ಉತ್ಸವ ಮೆರವಣಿಗೆ

ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಭದ್ರಾ ನದಿಯಲ್ಲಿ ಸಂಜೆ ವಿಸರ್ಜನೆ

ಭದ್ರಾವತಿ ಮುಖ್ಯರಸ್ತೆಯ ಭೋವಿ ಕಾಲೋನಿಯಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೩೮ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನೆ ಅಂಗವಾಗಿ ಭಾನುವಾರ ಉತ್ಸವ ಮೆರವಣಿಗೆ ನಡೆಯಿತು.
    ಭದ್ರಾವತಿ, ಸೆ. ೪: ನಗರದ ಹೊಸಮನೆ ಮುಖ್ಯರಸ್ತೆಯ ಭೋವಿ ಕಾಲೋನಿಯಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೩೮ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನೆ ಭಾನುವಾರ ನಡೆಯಿತು.
    ನಗರದ ಪ್ರಮುಖ ಸಂಘನೆಗಳಲ್ಲಿ ಇದು ಸಹ ಒಂದಾಗಿದ್ದು, ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ವಿನಾಯಕ ಮೂರ್ತಿಯನ್ನು ೫ ದಿನಗಳ ಕಾಲ ಪ್ರತಿಷ್ಠಾಪಿಸುವ ಮೂಲಕ ವಿಸರ್ಜಿಸಲಾಯಿತು.
ವಿಸರ್ಜನೆ ಅಂಗವಾಗಿ ನಡೆದ ರಾಜಬೀದಿ ಉತ್ಸವ ಮೆರವಣಿಗೆ ಗಮನ ಸೆಳೆಯಿತು. ಡೊಳ್ಳು ಕುಣಿತ, ವೀರಾಗಾಸೆ, ಗೊಂಬೆ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು. ಯುವಕರು ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಿಡಿದು ಕಲಾ ತಂಡಗಳ ಜೊತೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.


    ಉತ್ಸವ ಮೆರವಣಿಗೆ ಹೊಸಮನೆ ಮುಖ್ಯರಸ್ತೆ ಮೂಲಕ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ಗಾಂಧಿವೃತ್ತ ಮೂಲಕ ನಗರಸಭೆ ಮುಂಭಾಗ ಭದ್ರಾ ನದಿವರೆಗೂ ಸಾಗಿತು. ಈ ಬಾರಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅದರಲ್ಲೂ ನಗರಸಭೆ ಮುಂಭಾಗ ಕಟ್ಟೆಚ್ಚರ ವಹಿಸಲಾಗಿತ್ತು.
    ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮಟೆ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ೫ ಮಂದಿ ಪ್ರೊಬೇಷನರಿ ಉಪಾಧೀಕ್ಷಕರು, ೪ ಮಂದಿ ವೃತ್ತ ನಿರೀಕ್ಷಕರು, ೧೦ ಮಂದಿ ಠಾಣಾಧಿಕಾರಿಗಳು ಹಾಗು ಸುಮಾರು ೧೫೦ ಸಿಬ್ಬಂದಿಗಳು ಭದ್ರತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.


    ವಿನಾಯಕ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘಟನೆಗಳ ಪ್ರಮುಖರು, ಭಕ್ತರು ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.


No comments:

Post a Comment