ಅಪ್ಪಾಜಿ ೨ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಶಾರದ ಅಪ್ಪಾಜಿ
ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾಲೂಕು ಸವಿತಾ ಸಮಾಜ ಹಾಗು ದಯಾಸಾಗರ್ ಟ್ರಸ್ಟ್ ವತಿಯಿಂದ ಶುಕ್ರವಾರ ಭದ್ರಾವತಿ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ದಯಾಸಾಗರ್ ಟ್ರಸ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರಾಶ್ರಿತರು ಹಾಗು ವಿಕಲಚೇತನರಿಗೆ ಉಚಿತ ಕೇಶವಿನ್ಯಾಸ(ಕಟಿಂಗ್ ಮತ್ತು ಶೇವಿಂಗ್) ಕಾರ್ಯಕ್ರಮ ನಡೆಯಿತು.
ಭದ್ರಾವತಿ, ಸೆ. ೨ : ಪ್ರಸ್ತುತ ಕ್ಷೇತ್ರದಲ್ಲಿ ಪುರುಷರು ನಿರುದ್ಯೋಗಿಗಳಾಗುತ್ತಿದ್ದು, ಮಹಿಳೆಯರೇ ಕುಟುಂಬದ ಎಲ್ಲಾ ಜವಾಬ್ದಾರಿ ನಿಭಾಯಿಸುವಂತಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದ್ದಲ್ಲಿ ಭವಿಷ್ಯದಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಹೇಳಿದರು.
ಅವರು ಶುಕ್ರವಾರ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾಲೂಕು ಸವಿತಾ ಸಮಾಜ ಹಾಗು ದಯಾಸಾಗರ್ ಟ್ರಸ್ಟ್ ವತಿಯಿಂದ ನಗರದ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ದಯಾಸಾಗರ್ ಟ್ರಸ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರಾಶ್ರಿತರು ಹಾಗು ವಿಕಲಚೇತನರಿಗೆ ಉಚಿತ ಕೇಶವಿನ್ಯಾಸ(ಕಟಿಂಗ್ ಮತ್ತು ಶೇವಿಂಗ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಮಹಿಳೆಯರು ಮನೆಯ ಒಳಗೆ ಹಾಗು ಹೊರಗೆ ಎಲ್ಲಾ ಕೆಲಸಗಳನ್ನು ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಸರ್ಕಾರ ಒಂದೆಡೆ ಉಚಿತ ಅಕ್ಕಿ ನೀಡುತ್ತಿದ್ದು, ಮತ್ತೊಂದೆಡೆ ಮಹಿಳೆಯರು ಸ್ವಸಹಾಯ ಸಂಘ-ಸಂಸ್ಥೆಗಳಲ್ಲಿ ದುಡಿದು ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ನಡುವೆ ಪುರುಷರು ಯಾವುದೇ ಕೂಲಿ ಕೆಲಸಕ್ಕೂ ಸಹ ಹೋಗದೆ ಮನೆಯಲ್ಲಿಯೇ ಇದ್ದು ಸೋಮಾರಿಗಳಾಗುತ್ತಿದ್ದಾರೆ. ಇದು ಪ್ರಸ್ತುತ ಕ್ಷೇತ್ರದಲ್ಲಿನ ಪರಿಸ್ಥಿತಿಯಾಗಿದ್ದು, ಭವಿಷ್ಯದಲ್ಲಿ ಸಂಕಷ್ಟ ಎದುರಾಗುವ ಆತಂಕ ಕಂಡು ಬರುತ್ತಿದೆ. ಪುರುಷ ಮತ್ತು ಮಹಿಳೆ ಇಬ್ಬರು ಸಹ ದುಡಿಯಬೇಕು. ಆಗ ಮಾತ್ರ ಸಮಸ್ಯೆಗಳಿಂದ ಹೊರಬರಲು ಸಾಧ್ಯ. ಇದಕ್ಕೆ ಪರಿಹಾರ ಕ್ಷೇತ್ರದ ಎರಡು ಕಣ್ಣುಗಳಾಗಿರುವ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅಭಿವೃದ್ಧಿಯಾಗಬೇಕು. ಎಂ.ಜೆ ಅಪ್ಪಾಜಿ ಅವರು ಈ ಎರಡು ಕಾರ್ಖಾನೆಗಳ ಮೇಲೆ ಹೊಂದಿದ್ದ ಇಚ್ಛಾ ಶಕ್ತಿಯನ್ನು ಬೇರೆ ಯಾವ ರಾಜಕಾರಣಿ ಸಹ ಹೊಂದಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾಲೂಕು ಸವಿತಾ ಸಮಾಜ ಹಾಗು ದಯಾಸಾಗರ್ ಟ್ರಸ್ಟ್ ವತಿಯಿಂದ ಶುಕ್ರವಾರ ಭದ್ರಾವತಿ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ದಯಾಸಾಗರ್ ಟ್ರಸ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರಾಶ್ರಿತರು ಹಾಗು ವಿಕಲಚೇತನರಿಗೆ ಉಚಿತ ಕೇಶವಿನ್ಯಾಸ(ಕಟಿಂಗ್ ಮತ್ತು ಶೇವಿಂಗ್) ಕಾರ್ಯಕ್ರಮವನ್ನು ಶಾರದ ಅಪ್ಪಾಜಿ ಉದ್ಘಾಟಿಸಿದರು.
ಕುಟುಂಬದಲ್ಲಿ ಪುರುಷರಿಗೆ ಮಹಿಳೆಯರು ಹೆಚ್ಚಿನ ಸಹಕಾರ ನೀಡಬೇಕು. ಪುರುಷರು ಮಾಡುವ ಯಾವುದೇ ಕೆಲಸವಿರಲಿ ಅದನ್ನು ಬೆಂಬಲಿಸಿ ಪ್ರೋತ್ಸಾಹಿಸಿದಾಗ ಮಾತ್ರ ಅವರು ಸಹ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಅಪ್ಪಾಜಿ ಅವರು ಸಾಮಾನ್ಯ ಕಾರ್ಮಿಕನಾಗಿದ್ದು, ಅವರು ರಾಜಕೀಯದಲ್ಲಿ ಹೆಚ್ಚಿನ ಅಸಕ್ತಿ ತೋರಿಸಿದರು. ಅವರು ಕೈಗೊಳ್ಳುತ್ತಿದ್ದ ಯಾವುದೇ ಕೆಲಸಕ್ಕೂ ಕುಟುಂಬದಲ್ಲಿ ವಿರೋಧ ವ್ಯಕ್ತಪಡಿಸಲಿಲ್ಲ. ಅದರಲ್ಲೂ ಕ್ಷೇತ್ರದ ಜನರು ಈ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ಸಹಕಾರ ನೀಡಿದರು. ಇದರಿಂದಾಗಿ ಅವರು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಅಪ್ಪಾಜಿ ಕ್ಷೇತ್ರದಲ್ಲಿ ಬಡ ಜನರ ಧ್ವನಿಯಾಗಿದ್ದರು. ಅವರ ರಾಜಕೀಯ ಬದುಕು ವಿಶಿಷ್ಟವಾಗಿದೆ. ಕ್ಷೇತ್ರದ ಅಭಿವೃದ್ದಿ ವಿಚಾರಗಳಲ್ಲಿ ಅವರು ಎಂದಿಗೂ ನಿರ್ಲಕ್ಷ್ಯತನ ತೋರಿಸಲಿಲ್ಲ. ಸದಾ ಕಾಲ ಜನರ ಮಧ್ಯೆ ಇದ್ದವರು ಎಂದು ಬಣ್ಣಿಸಿದರು.
ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಸವಿತಾ ಸಮಾಜದ ಪ್ರಮುಖರಾದ ಬಿ.ಎನ್ ಮಹೇಶ್‌ಕುಮಾರ್, ನರಸಿಂಹಮೂರ್ತಿ, ಗೋಪಿ, ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿಯಮ್ಮ, ನಾಗವೇಣಿ, ಧರ್ಮರಾಜ್, ರಮೇಶ್, ಶಂಕರ್, ದಯಾಸಾಗರ್ ಟ್ರಸ್ಟ್‌ನ ಆರ್. ಮೋಸಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದರಾಜ್ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಹಿರಿಯ ಸದಸ್ಯರಾದ ಶ್ರೀನಿವಾಸ್, ಗಾಡಿ ಶ್ರೀನಿವಾಸ್ ಮತ್ತು ಬಸ್‌ಸ್ಟಾಂಡ್ ಮಹೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
No comments:
Post a Comment