Thursday, September 8, 2022

ಮಲೆನಾಡು ಅಡಕೆ ತಟ್ಟೆ ತಯಾರಿಕರ ಸಂಘದಿಂದ ಅನ್ನಸಂತರ್ಪಣೆ

ಭದ್ರಾವತಿಯಲ್ಲಿ  ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಅಂಗವಾಗಿ ಈ ಬಾರಿ ಮಲೆನಾಡು ಅಡಕೆ ತಟ್ಟೆ ತಯಾರಿಕರ ಸಂಘದ ವತಿಯಿಂದ ವಿಶೇಷವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
    ಭದ್ರಾವತಿ, ಸೆ. ೮: ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಅಂಗವಾಗಿ ಈ ಬಾರಿ ಮಲೆನಾಡು ಅಡಕೆ ತಟ್ಟೆ ತಯಾರಿಕರ ಸಂಘದ ವತಿಯಿಂದ ವಿಶೇಷವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
    ಸಿ.ಎನ್ ರಸ್ತೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಬಾಲಾಜಿ ಲಾಡ್ಜ್ ಮುಂಭಾಗ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ವಿಶೇಷವಾಗಿ ತಟ್ಟೆಯಿಂದ ಹಾರವನ್ನು ವಿನಾಯಕ ಮೂರ್ತಿಗೆ ಸಮರ್ಪಿಸಲಾಯಿತು.
    ಮಲೆನಾಡು ಅಡಿಕೆ ತಟ್ಟೆ ತಯಾರಿಕರ  ಸಂಘದ ಅಧ್ಯಕ್ಷ ಜಯಪಾಲ್, ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ರಾಮು, ಯಶೋಧರ ಪ್ರಭು, ಧನಂಜಯ, ಅರುಣಗಿರಿ, ಸುನಿಲ್, ಸೋಮಣ್ಣ, ವಿನಯ್, ಸುಬ್ರಮಣ್ಯ, ರುದ್ರೇಶ್ ಮತ್ತು ಲೋಕೇಶ್ ಹಾಗು ದಾನಿ ಎಸ್‌ಎಲ್‌ಎನ್ ಕಂಪನಿ ಮಾಲೀಕ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment