ಭದ್ರಾವತಿ, ಸೆ. ೧೬: ತಾಲೂಕಿನ ಮಾವಿನಕೆರೆ ಕಾಲೋನಿಯ ತಂದೆ-ಮಗ ಇಬ್ಬರು ಕಾಲುವೆಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮಾವಿನಕೆರೆ ಕಾಲೋನಿ ನಿವಾಸಿಗಳಾದ ಮಹಮ್ಮದ್ ಆಸಂ(೬೭) ಮತ್ತು ಮಹಮ್ಮದ್ ಸನಾಉಲ್ಲಾ (೨೨) ಸಾವನ್ನಪ್ಪಿದ ತಂದೆ-ಮಗ ಎಂದು ಗುರುತಿಸಲಾಗಿದೆ.
ಮನೆ ಸಮೀಪದಲ್ಲಿಯೇ ಕಾಲುವೆ ಇದ್ದು, ಮಹಮ್ಮದ್ ಆಸಂ ಅವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಪೈಕಿ ಕೊನೆಯ ಮಗನಾದ ಮಹಮ್ಮದ್ ಸನಾಉಲ್ಲಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನು ಎನ್ನಲಾಗಿದೆ. ಮಗನ ಆರೈಕೆಯನ್ನು ತಂದೆಯೇ ನೋಡಿಕೊಳ್ಳುತ್ತಿದ್ದರು. ಕಳೆದ ೩ ದಿನಗಳ ಹಿಂದೆ ಸನಾಉಲ್ಲಾ ಕಾಲುವೆಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ತಂದೆ ಅಸಂ ಸಹ ಕಾಲುವೆ ಬಿದ್ದಿದ್ದಾರೆ ಎನ್ನಲಾಗಿದೆ. ಆದರೆ ಕಾಲುವೆಗೆ ಬೀಳಲು ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
ಎರಡು ದಿನ ಕಾಲುವೆಯಲ್ಲಿ ಹುಡುಕಾಟ ನಡೆಸಿದರೂ ಇಬ್ಬರ ಮೃತದೇಹ ಪತ್ತೆಯಾಗಿರಲಿಲ್ಲ .ಅಸಂ ಮೃತದೇಹ ಕಾಲುವೆಗೆ ಬಿದ್ದ ಜಾಗದಿಂದ ಅರ್ಧ ಕಿ.ಮೀ ದೂರದಲ್ಲಿ ಹಾಗು ಮಗ ಸನಾಉಲ್ಲಾ ಮೃತದೇಹ ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಹಂಚಿನ ಸಿದ್ದಾಪುರದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಕುಟುಂಬಸ್ಥರು ಹೊಳೆಹೊನ್ನೂರು ಮತ್ತು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
No comments:
Post a Comment