ಭದ್ರಾವತಿ ನಗರಸಭೆ ವಾರ್ಡ್ ನಂ. ೨೭ರ ಆಂಜನೇಯ ಅಗ್ರಹಾರ(ಕೂಲಿಬ್ಲಾಕ್ ಶೆಡ್)ದ ೨ನೇ ಕ್ರಾಸ್‌ನಲ್ಲಿ ಕಳೆದ ೫೦ ವರ್ಷಗಳಿಂದ ಗೆಳೆಯರ ಯುವಕ ಸಂಘದ ವತಿಯಿಂದ ವಿಶಿಷ್ಟವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುವ ಮೂಲಕ ಎಲ್ಲರ ಗಮನ ಸೆಳೆಯಲಾಗುತ್ತಿದೆ.
ಭದ್ರಾವತಿ, ಸೆ. ೧೬: ನಗರಸಭೆ ವಾರ್ಡ್ ನಂ. ೨೭ರ ಆಂಜನೇಯ ಅಗ್ರಹಾರ(ಕೂಲಿಬ್ಲಾಕ್ ಶೆಡ್)ದ ೨ನೇ ಕ್ರಾಸ್‌ನಲ್ಲಿ ಕಳೆದ ೫೦ ವರ್ಷಗಳಿಂದ ಗೆಳೆಯರ ಯುವಕ ಸಂಘದ ವತಿಯಿಂದ ವಿಶಿಷ್ಟವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುವ ಮೂಲಕ ಎಲ್ಲರ ಗಮನ ಸೆಳೆಯಲಾಗುತ್ತಿದೆ.
ಈ ಭಾಗದಲ್ಲಿ ಎಲ್ಲಾ ಧರ್ಮದ, ಎಲ್ಲಾ ಜಾತಿಯ ಬಡವರು ಹೆಚ್ಚಾಗಿ ವಾಸಿಸುತ್ತಿದ್ದು, ಪ್ರತಿ ವರ್ಷ ವಿನಾಯಕ ಚತುರ್ಥಿಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳ ಅಥವಾ ವ್ಯಕ್ತಿಗಳ ಮೇಲೆ ಅವಲಂಬಿತವಾಗದೆ ಈ ಭಾಗದ ನಿವಾಸಿಗಳೇ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಈ ಬಾರಿ ೫೦ನೇ ವರ್ಷದ ವಿನಾಯಕ ಮಹೋತ್ಸವ ಅಂಗವಾಗಿ ಪೇಟ ಧರಿಸಿ, ತ್ರಿಶೂಲ ಹಾಗು ಖಡ್ಗ ಹಿಡಿದ ಬೃಹತ್ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ವಿಶೇಷ ಎಂದರೆ ಯಾವುದೇ ಪ್ರತಿಷ್ಠೆಯಿಂದ ಹಬ್ಬ ಆಚರಿಸುತ್ತಿಲ್ಲ. ಬದಲಾಗಿ ಧಾರ್ಮಿಕ ಆಚರಣೆಯಲ್ಲಿ ನಂಬಿಕೆ ಹೊಂದಿ ಸೌಹಾರ್ದತೆ ಕಂಡುಕೊಂಡಿದ್ದಾರೆ. ಈ ನಡುವೆ ಸುಳ್ಳು ಮಾಹಿತಿಯಿಂದ ಈ ಭಾಗದಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನ ಸಹ ನಡೆಯುತ್ತಿದ್ದು, ಇವುಗಳಿಗೆ ಕಿವಿಗೊಡದಿರುವಂತೆ ಶಾಂತಿಯುತವಾಗಿ ಹಬ್ಬ ಆಚರಿಸಲು ಎಲ್ಲರೂ ಸಹಕಾರ ನೀಡುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
No comments:
Post a Comment