ನಾಗರತ್ನಮ್ಮ
ಭದ್ರಾವತಿ, ಅ. ೮: ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್‌ರವರ ಮಾತೃಶ್ರೀ ನಾಗರತ್ನಮ್ಮ(೮೦) ಶನಿವಾರ ನಿಧನ ಹೊಂದಿದರು.
ತಾಲೂಕಿನ ದೊಡ್ಡಗೊಪ್ಪೇನಹಳ್ಳಿ ಗ್ರಾಮದ ನಿವಾಸಿಯಾದ ದಿವಂಗತ ಪಟೇಲ್ ಮಹೇಶ್ವರಪ್ಪನವರ ಧರ್ಮಪತ್ನಿಯಾದ ನಾಗರತ್ನಮ್ಮ ಅವರಿಗೆ ಡಿ.ಎಂ ವಿಶ್ವನಾಥ್ ಸೇರಿದಂತೆ ಇಬ್ಬರು ಗಂಡು ಹಾಗು ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರ ಅಂತ್ಯಕ್ರಿಯೆ ಅ.೯ರ ಭಾನುವಾರ ಮಧ್ಯಾಹ್ನ ಗ್ರಾಮದಲ್ಲಿರುವ ಇವರ ತೋಟದಲ್ಲಿ ನಡೆಯಲಿದೆ.
ತಾಲೂಕು ವಕೀಲರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗ್ರಾಮದ ಮುಖಂಡರು ಸೇರಿದಂತೆ ಗಣ್ಯರು ನಾಗರತ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
No comments:
Post a Comment