ಎಂ. ಶಿವಲಿಂಗಪ್ಪ
ಭದ್ರಾವತಿ, ಅ. ೧೬ : ನಗರಸಭೆ ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್ ಅವರ ತಂದೆ, ವಿಐಎಸ್‌ಎಲ್ ನಿವೃತ್ತ ಉದ್ಯೋಗಿ ಎಂ. ಶಿವಲಿಂಗಪ್ಪ(೮೦) ಭಾನುವಾರ ನಿಧನ ಹೊಂದಿದರು.
ಪತ್ನಿ ಹಾಗು ಎಂ.ಎಸ್ ರಾಜ್‌ಕುಮಾರ್ ಸೇರಿದಂತೆ ೩ ಗಂಡು ಮಕ್ಕಳು ಇದ್ದರು. ಎಂ. ಶಿವಲಿಂಗಪ್ಪನವರು ವಿಐಎಸ್‌ಎಲ್ ನ್ಯೂ ರೋಲ್ ಮಿಲ್‌ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೊರಟಿಕೆರೆಯಲ್ಲಿ ವಾಸವಾಗಿದ್ದರು.
ಇವರ ನಿಧನಕ್ಕೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗು ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಸೇರಿದಂತೆ, ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment