ಭದ್ರಾವತಿ, ನ. 15: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಸಹಕಾರಿ ಹಾಲು ಒಕ್ಕೂಟ, ಸಹಕಾರ ಇಲಾಖೆ ಹಾಗು ತಾಲೂಕಿನ ಎಲ್ಲಾ ರೀತಿಯ ಸಹಕಾರ ಸಂಘ ಮತ್ತು ಬ್ಯಾಂಕುಗಳ ವತಿಯಿಂದ ಮಂಗಳವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ, ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಪ್ರಮುಖರಾದ ಕೆ.ಎನ್ ಬೈರಪ್ಪ ಗೌಡ, ಎಚ್.ಎಲ್ ಷಡಕ್ಷರಿ, ಡಿ. ಆನಂದ್, ಜೆ.ಪಿ ಯೋಗೇಶ್, ಟಿ.ಆರ್ ಭೀಮರಾವ್, ಗೊಂದಿ ಜಯರಾಮ್, ಎಚ್.ಎಸ್ ಸಂಜೀವಕುಮಾರ್, ಎಚ್.ಎನ್ ನಾಗರಾಜ್ ಬಲ್ಕಿಶ್ ಬಾನು, ಎಂ. ಕುಬೇಂದ್ರಪ್ಪ ಎಚ್. ಲೋಕೇಶ್, ಸಿ. ಮಲ್ಲೇಶಪ್ಪ, ಎ.ಎಸ್ ಸುರೇಶ್, ಬಿ.ಎಚ್ ವಸಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಅಧ್ಯಕ್ಷ ಕೆ.ಎಲ್ ಜಗದೀಶ್ವರ್ ಅಧ್ಯಕ್ಷತೆ ವಹಿಸಿದ್ದರು. ಟಿ.ಎಸ್ ದುಗ್ಗೇಶ್ ಸ್ವಾಗತಿಸಿ, ಎಂ ವಿರುಪಾಕ್ಷಪ್ಪ ನಿರೂಪಿಸಿದರು.
No comments:
Post a Comment