ಭದ್ರಾವತಿ ಹೊಸಮನೆ ಹನುಮಂತನಗರದ ಆನಂದ ಮಾರ್ಗ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಅಚರಿಸಲಾಯಿತು. ಎಲ್ಲಾ ಮಕ್ಕಳಿಗೂ ಬಾಳೆಹಣ್ಣು, ಬಿಸ್ಕೆಟ್, ಬನ್ ಹಾಗು ಸಿಹಿ ವಿತರಿಸಿ ಮಕ್ಕಳ ದಿನಾಚರಣೆ ಶುಭ ಕೋರಲಾಯಿತು.
ಭದ್ರಾವತಿ, ನ. ೧೪ : ಹೊಸಮನೆ ಹನುಮಂತನಗರದ ಆನಂದ ಮಾರ್ಗ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಅಚರಿಸಲಾಯಿತು.
ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಯೂನಿಯನ್ ಪ್ರಮುಖರು ಮಾತನಾಡಿ, ಮಕ್ಕಳು ಕಲಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಲಾಯಿತು. ಶಾಲೆಯ ಮಾತಾಜಿ(ದೀದಿ) ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಎಲ್ಲಾ ಮಕ್ಕಳಿಗೂ ಬಾಳೆಹಣ್ಣು, ಬಿಸ್ಕೆಟ್, ಬನ್ ಹಾಗು ಸಿಹಿ ವಿತರಿಸಿ ಮಕ್ಕಳ ದಿನಾಚರಣೆ ಶುಭ ಕೋರಲಾಯಿತು.
ಯೂನಿಯನ್ ಪ್ರಮುಖರಾದ ಸುಂದರ್‌ಬಾಬು, ಚಂದ್ರಶೇಖರ್, ಸುರೇಶ್‌ಕುಮಾರ್, ಅಭಿಲಾಷ್, ಮನೋಹರ್, ಶಿವಣ್ಣಗೌಡ, ಬಿ.ಎಚ್ ನಾಗೇಂದ್ರರೆಡ್ಡಿ, ಕೃಷ್ಣ, ನಾರಾಯಣಸ್ವಾಮಿ, ಷಣ್ಮುಖ, ಪ್ರಕಾಶ್ ಹಾಗು ಶಾಲೆಯ ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಭದ್ರಾವತಿ ಹೊಸಮನೆ ಹನುಮಂತನಗರದ ಆನಂದ ಮಾರ್ಗ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಅಚರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
No comments:
Post a Comment