ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ಭದ್ರಾವತಿಯಲ್ಲಿ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಎಸ್. ಅಡವೀಶಯ್ಯ ಚಾಲನೆ ನೀಡಿದರು.
ಭದ್ರಾವತಿ, ನ. ೨೨: ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ನಗರದ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರದಲ್ಲಿ ಸುಮಾರು ೪೦ ಮಂದಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.
ಹಿರಿಯ ನಾಗರೀಕರು ಹಾಗು ೧೮ ವರ್ಷ ಮೇಲ್ಪಟ್ಟವರಿಗೆ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರದ ಯಶಸ್ವಿಗೆ ಯೆನೆಪೋಯ ಡೆಂಟಲ್ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿಯನ್ನೊಳಗೊಂಡ ಸುಮಾರು ೪೦ ಜನರ ತಂಡ ಹಾಗು ರೋಟರಿ ಪದಾಧಿಕಾರಿಗಳು, ಸದಸ್ಯರು ಮತ್ತು ಕಲಾ ಡಿಜಿಟಲ್ ಸ್ಟುಡಿಯೋ ಸಿಬ್ಬಂದಿಗಳು ಶ್ರಮಿಸಿದರು.
ಶಿಬಿರಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಎಸ್. ಅಡವೀಶಯ್ಯ ಚಾಲನೆ ನೀಡಿದರು. ಯೆನೆಪೋಯ ಡೆಂಟಲ್ ಕಾಲೇಜಿನ ವಿಭಾಗದ ಮುಖ್ಯಸ್ಥ ಡಾ. ಸನತ್ ಶೆಟ್ಟಿ, ಪ್ರೊಫೆಸರ್‌ಗಳಾದ ಡಾ. ರಾಜೇಶ್‌ಶೆಟ್ಟಿ, ಡಾ. ವಿದ್ಯಾ ಭಟ್, ಕಲಾ ಸ್ಟುಡಿಯೋ ಕೆವಿನ್ ಸೋಲೊಮಾನ್, ರೋಟರಿ ಕ್ಲಬ್ ಕಾರ್ಯದರ್ಶಿ ಕೆ.ಎಚ್ ಶಿವಕುಮಾರ್, ದುಷ್ಯಂತ್‌ರಾಜ್, ತೀರ್ಥಯ್ಯ, ದಯಾ ಸಾಗರ್ ಟ್ರಸ್ಟ್‌ನ ಮೋಸಸ್ ರೋಸಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ನಗರದ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ಆಯೋಜಿಸಲಾಗಿತ್ತು.
No comments:
Post a Comment