ಬಿ.ಜಿ ಜಗದೀಶಗೌಡ
ಭದ್ರಾವತಿ, ಡಿ. ೮ : ನಗರದ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ ನಿಯಮಿತ(ರ‍್ಯಾಮ್ಕೋಸ್) ನೂತನ ಅಧ್ಯಕ್ಷರಾಗಿ ತಾಲೂಕಿನ ಆನವೇರಿ ನಿವಾಸಿ, ತರಳಬಾಳು ಯುವ ವೇದಿಕೆ ಮಾಜಿ ಅಧ್ಯಕ್ಷ ಬಿ.ಜಿ ಜಗದೀಶಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದುವರೆಗೂ ರ‍್ಯಾಮ್ಕೋಸ್ ಅಧ್ಯಕ್ಷರಾಗಿ ಸಿ. ಮಲ್ಲೇಶಪ್ಪ ಸೇವೆ ಸಲ್ಲಿಸುತ್ತಿದ್ದರು. ಇದೀಗ ಬಿ.ಜಿ ಜಗದೀಶಗೌಡ ಅಧ್ಯಕ್ಷರಾಗಿದ್ದು, ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿರುವ ಸಹಕಾರ ಅಭಿವೃದ್ಧಿ ಅಧಿಕಾರಿ ಶಾಂತರಾಜ್ ಘೋಷಿಸಿದ್ದಾರೆ.
ಸಂಘದ ಉಪಾಧ್ಯಕ್ಷ ಎಚ್.ಟಿ ಉಮೇಶ್, ನಿರ್ದೇಶಕರಾದ ಸಿ. ಹನುಮಂತಪ್ಪ, ಸಿ. ಮಲ್ಲೇಶಪ್ಪ, ಎಂ. ಪರಮೇಶ್ವರಪ್ಪ, ಯು. ಗಂಗನಗೌಡ, ಜಿ. ಈ.ಚನ್ನಪ್ಪ, ಮಹೇಶ್, ಹೆಚ್.ಎಲ್ ಷಡಾಕ್ಷರಿ. ಎಂ.ಎಸ್ ಬಸರಾಜಪ್ಪ, ಲಲಿತಮ್ಮ, ಎಚ್.ಆರ್ ತಿಮ್ಮಪ್ಪ, ಎಸ್. ಮಹೇಶ್ವರಪ್ಪ, ಎಚ್.ಎಸ್ .ಸಂಜೀವ್‌ಕುಮಾರ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ. ವಿರುಪಾಕ್ಷಪ್ಪ ಉಪಸ್ಥಿತರಿದ್ದರು.
No comments:
Post a Comment