ಭದ್ರಾವತಿ, ಡಿ. ೨೪: ಸಮಾಜ ಸೇವಕ, ನಗರದ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್‌ರವರ ೪೯ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಡಿ.೨೫ರ ಭಾನುವಾರ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ನೇಹ ಜೀವಿ ಬಳಗದ ವತಿಯಿಂದ ಹುತ್ತಾ ಕಾಲೋನಿ ಚಂದ್ರಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಬರವಣಿಗೆ ಪುಸ್ತಕ ಮತ್ತು ಹಿರಿಯ ನಾಗರೀಕರಿಗೆ ಕನ್ನಡಕ ಹಾಗು ಮಹಿಳೆಯರಿಗೆ ಸ್ವೆಟರ್ ಮತ್ತು ನಿರಾಶ್ರಿತರಿಗೆ ಕಂಬಳಿ ವಿತರಣೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
ಮಹಾಮಾರಿ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಕಡುಬಡವರಿಗೆ ದವಸ ಧಾನ್ಯ ವಿತರಣೆ, ಪ್ರತಿದಿನ ಆಹಾರ ಪೂರೈಕೆ, ದೇವಸ್ಥಾನಗಳ ಸಭೆ-ಸಮಾರಂಭಗಳಲ್ಲಿ ಉಚಿತ ಅನ್ನದಾಸೋಹ ಸೇರಿದಂತೆ ಇನ್ನಿತರ ಸೇವಾಕಾರ್ಯಗಳನ್ನು ಹಲವಾರು ವರ್ಷಗಳಿಂದ ಪೊಲೀಸ್ ಉಮೇಶ್‌ರವರು ಸ್ನೇಹ ಜೀವಿ ಬಳಗದ ಸಹಯೋಗದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಡಿ.೨೬ರಂದು ಇವರ ೪೯ನೇ ಹುಟ್ಟುಹಬ್ಬ ನಡೆಯಲಿದೆ.
No comments:
Post a Comment