ಭದ್ರಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿಯವರ ಹುಟ್ಟುಹಬ್ಬ ಜನ್ನಾಪುರ ಜಯಶ್ರೀ ವೃತ್ತದ ಬಳಿ ಶ್ರೀ ರವೀಂದ್ರನಾಥ ಠಾಕೋರ್ ಆಟೋ ನಿಲ್ದಾಣದ ವತಿಯಿಂದ ಪಕ್ಷದ ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಎ.ಜಿ ರಾಧಮ್ಮ ಪ್ರಭಾಕರ್ ನೇತೃತ್ವದಲ್ಲಿ ಭಾನುವಾರ ಆಚರಿಸಲಾಯಿತು.
ಭದ್ರಾವತಿ, ಜ. ೧ : ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿಯವರ ಹುಟ್ಟುಹಬ್ಬ ಜನ್ನಾಪುರ ಜಯಶ್ರೀ ವೃತ್ತದ ಬಳಿ ಶ್ರೀ ರವೀಂದ್ರನಾಥ ಠಾಗೋರ್ ಆಟೋ ನಿಲ್ದಾಣದ ವತಿಯಿಂದ ಪಕ್ಷದ ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಎ.ಜಿ ರಾಧಮ್ಮ ಪ್ರಭಾಕರ್ ನೇತೃತ್ವದಲ್ಲಿ ಭಾನುವಾರ ಆಚರಿಸಲಾಯಿತು.
ಆಟೋ ಚಾಲಕರು, ಸ್ಥಳೀಯರು ನಿವಾಸಿ, ಅಭಿಮಾನಿಗಳು ಹಾಗು ಮುಖಂಡರು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾರದ ಅಪ್ಪಾಜಿಯವರು ನಮ್ಮ ಮೇಲೆ ಹೊಂದಿರುವ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದು, ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಆಟೋ ಚಾಲಕರಾದ ಅಪ್ಪಿ( ಆಟೋ ರಾಜು), ದೂದಾನಾಯ್ಕ, ನೂರುಲ್ಲಾ, ಮುಲಾಲಿ, ಹಂಪುಲ, ಮೋಹನ್, ಮುನ್ನ, ದಾದಾಪೀರ್, ಬಾಬಣ್ಣ, ರಾಜು, ಸೋಮಣ್ಣ, ಶಿವಣ್ಣ, ಪರಮಿ, ವಾರ್ಡ್ ನಗರಸಭಾ ಸದಸ್ಯೆ ನಾಗರತ್ನ ಅನಿಲ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment