ಭದ್ರಾವತಿ, ಮಾ. ೨೪: ರಾಜ್ಯ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಆರಂಭಗೊಳ್ಳುವ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮಾ.೨೫ರ ಶನಿವಾರ ಬೆಳಿಗ್ಗೆ ೯:೩೦ಕ್ಕೆ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರು, ಚುನಾವಣಾ ಜಾಗೃತ ಸಂಘಗಳ ಸಂಚಾಲಕರು ಮತ್ತು ಕ್ಯಾಂಪಸ್ ಅಂಬಾಸಿಡರ್, ಬಿಎಲ್‌ಓಗಳು ತರಬೇತಿ ಕಾರ್ಯಾಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವುದು. ಈಗಾಗಲೇ ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಪಡೆದುಕೊಂಡಿರುವ ಇಎಲ್‌ಸಿ ಮಾಹಿತಿ ಪರಸ್ಪರ ವಿನಿಮಯ ಮಾಡಿಕೊಳ್ಳುವುದು. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಸೂಕ್ತ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುವುದು.
ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯಮಟ್ಟದ ತರಬೇತುದಾರ ಬಿ.ಆರ್.ಸಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್ ಪರ್ವೀಜ್, ಮೊ: ೯೮೮೬೨೧೪೧೬೦, ತಾಲೂಕು ಮಟ್ಟದ ಇಎಲ್‌ಸಿ ತರಬೇತುದಾರರಾದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎಸ್ ಶಿವರುದ್ರಪ್ಪ, ಮೊ: ೮೬೬೦೫೨೮೭೪೪, ಸಹ ಶಿಕ್ಷಕ ಎಂ.ಜಿ ನವೀನ್‌ಕುಮಾರ್, ಮೊ: ೯೬೧೧೬೯೨೧೨೫, ಮುಖ್ಯ ಶಿಕ್ಷಕ ಸಿ.ಡಿ ಮಂಜುನಾಥ್, ಮೊ : ೯೯೪೫೧೦೨೮೩೮ ಮತ್ತು ಸಹ ಶಿಕ್ಷಕ ಬಿ. ಮಂಜಪ್ಪ, ಮೊ: ೯೭೩೧೩೦೯೩೯೮ ಪಾಲ್ಗೊಳ್ಳಲಿದ್ದಾರೆ.
No comments:
Post a Comment