ಭದ್ರಾವತಿ, ಮಾ. ೨೪ : ಗುತ್ತಿಗೆದಾರ ದಿವಂಗತ ಎಸ್.ಎಚ್ ಪೀರಾನ್‌ರವರ ಪತ್ನಿ, ಬೊಮ್ಮನಕಟ್ಟೆ ನಿವಾಸಿ ಎಸ್. ಮಹಬೂಬ್ ಬೀ(೭೮) ಗುರುವಾರ ನಿಧನ ಹೊಂದಿದರು.
ರಾಜ್ಯ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಎಚ್.ಎಂ ಖಾದ್ರಿ ಸೇರಿದಂತೆ ಇಬ್ಬರು ಮಕ್ಕಳು, ಮೊಮ್ಮಕ್ಕಳು ಇದ್ದರು. ಮಹಬೂಬ್ ಬೀ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಇವರ ಅಂತ್ಯಕ್ರಿಯೆ ರಾತ್ರಿ ನೆರವೇರಿತು.
ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್, ಶಾಸಕರಾದ ಪ್ರಿಯಾಂಕ್ ಖರ್ಗೆ, ಬಿ.ಕೆ ಸಂಗಮೇಶ್ವರ್, ಜಾತ್ಯತೀತ ಜನತಾ ದಳ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ, ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ಜಿ. ರಾಜು, ಸುರೇಶ್(ಪೇಪರ್), ಸುಧೀಂದ್ರ ಕಾಂಗ್ರೆಸ್ ಮುಖಂಡ ಎಚ್. ರವಿಕುಮಾರ್ ಸೇರಿಂದತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
No comments:
Post a Comment