ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಮೈಸೂರು ವತಿಯಿಂದ ನೀಡಲಾಗುವ ಗುರು ಸೇವಾರತ್ನ ಪ್ರಶಸ್ತಿಯನ್ನು ಈ ಬಾರಿ ಭದ್ರಾವತಿ ತಾಲೂಕಿನ ಒಟ್ಟು ೧೦ ಮಂದಿ ಸಿಆರ್‌ಪಿ, ಬಿಆರ್‌ಪಿ ಹಾಗು ಬಿಐಇಆರ್‌ಟಿಗಳು ಪಡೆದುಕೊಂಡಿದ್ದಾರೆ. ಇವರನ್ನು ಗುರುವಾರ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಮೇ. ೧೬ : ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಮೈಸೂರು ವತಿಯಿಂದ ನೀಡಲಾಗುವ ಗುರು ಸೇವಾರತ್ನ ಪ್ರಶಸ್ತಿಯನ್ನು ಈ ಬಾರಿ ತಾಲೂಕಿನ ಒಟ್ಟು ೧೦ ಮಂದಿ ಸಿಆರ್‌ಪಿ, ಬಿಆರ್‌ಪಿ ಹಾಗು ಬಿಐಇಆರ್‌ಟಿಗಳು ಪಡೆದುಕೊಂಡಿದ್ದಾರೆ.
ಬಿಐಇಆರ್‌ಟಿ ಡಿ.ಎಚ್ ತೀರ್ಥಪ್ಪ, ಹಿರಿಯೂರು ಸಿಆರ್‌ಪಿ ಜಿ.ಎಚ್ ವೇಣುಗೋಪಾಲ್, ಹೊಳೆಹೊನ್ನೂರು ಸಿಆರ್‌ಪಿ ಮಹಮದ್ ಜುಬಿಉಲ್ಲಾ, ಸಿದ್ದಾಪುರ ಸಿಆರ್‌ಪಿ ಜಿ. ಹರೀಶ್, ಬಿಆರ್‌ಪಿ ಪ್ರೌಢ ಬಿ.ಆರ್ ಪ್ರಭಾಕರ್, ಹೊಳೆಹೊನ್ನೂರು ಸಿಆರ್‌ಪಿ ಮಂಜಪ್ಪ, ಅರಳಿಹಳ್ಳಿ ಉರ್ದು ಸಿಆರ್‌ಪಿ ಆಸ್ಟಿಯಾನಾಜ್, ಬಿಆರ್‌ಪಿ ಶ್ವೇತಾ, ಅರಹತೊಳಲು ಸಿಆರ್‌ಪಿ ಪಿ.ಎಂ ವಾಣಿ ಮತ್ತು ಬಿಆರ್‌ಪಿ ಎಸ್.ಎಂ ಪ್ರಿಯಾಂಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮತ್ತು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಸೇರಿದಂತೆ ಇನ್ನಿತರರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಿ. ಪ್ರಭು, ಶಿಕ್ಷಣ ಸಂಯೋಜಕ ರವಿಕುಮಾರ್, ಸಿ. ಚನ್ನಪ್ಪ, ಹಿಂದಿ ಶಿಕ್ಷಕಿ ತ್ರಿವೇಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment