ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ಮುಖಂಡ, ಸಮಾಜ ಸೇವಕ ಎಚ್.ಸಿ ರಮೇಶ್‌ರವರ ಹುಟ್ಟುಹಬ್ಬ ಆಚರಿಸಲಾಯಿತು.
ಭದ್ರಾವತಿ, ಮಾ. ೧ : ನಗರದ ಬಿಜೆಪಿ ಪಕ್ಷದ ಮುಖಂಡ, ಸಮಾಜ ಸೇವಕ ಎಚ್.ಸಿ ರಮೇಶ್‌ರವರ ಹುಟ್ಟುಹಬ್ಬ ಆಚರಿಸಲಾಯಿತು.
ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನೌಕರ, ಕ್ರೀಡಾಪಟು ಚೆನ್ನಯ್ಯರವರ ಪುತ್ರರಾಗಿರುವ ಎಚ್.ಸಿ ರಮೇಶ್ ನಗರದಲ್ಲಿಯೇ ಹುಟ್ಟಿ ಬೆಳೆದಿದ್ದು, ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಉದ್ಯಮಿಯಾಗಿ ಹಾಗು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ.
ಪಕ್ಷದ ರಾಷ್ಟ್ರ ಮತ್ತು ರಾಜ್ಯದ ಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಮೇಶ್‌ರವರು ತಮ್ಮ ಪ್ರಭಾವ ಬಳಸಿಕೊಂಡು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಎದುರು ನೋಡುತ್ತಿದ್ದಾರೆ.
ಇವರ ಹುಟ್ಟುಹಬ್ಬಕ್ಕೆ ನಗರದ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು, ಹಿತೈಷಿಗಳು, ಅಭಿಮಾನಿಗಳು ಶುಭ ಕೋರುವ ಮೂಲಕ ಅಭಿನಂದಿಸಿದ್ದಾರೆ.
No comments:
Post a Comment