ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್
ಭದ್ರಾವತಿ, ಏ. ೧: ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್‌ಗೆ ಏ.೨ರ ಭಾನುವಾರ ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್ ಅಧಿಕೃತ ಭೇಟಿ ನೀಡಲಿದ್ದು, ಹಲವು ಸೇವಾಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ನ್ಯೂಟೌನ್ ಉಂಬ್ಳೆಬೈಲು ರಸ್ತೆ ಲಯನ್ಸ್ ಭವನದಲ್ಲಿ ಬೆಳಿಗ್ಗೆ ೯.೩೦ಕ್ಕೆ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್‌ರವರಿಗೆ ಸ್ವಾಗತ ನಡೆಯಲಿದ್ದು, ನಂತರ ೧೦ ಗಂಟೆಗೆ ಹೊಸಸೇತುವೆ ರಸ್ತೆ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ಬಸ್ ತಂಗುದಾಣ ಡಾ.ಎಂ.ಕೆ ಭಟ್ ಉದ್ಘಾಟಿಸಲಿದ್ದಾರೆ.
೧೦.೩೦ಕ್ಕೆ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ. ೧೧ ಗಂಟೆಗೆ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗ ನೂತನವಾಗಿ ನಿರ್ಮಿಸಲಾಗಿರುವ ಕ್ಲಾಕ್ ಟವರ್ ಮತ್ತು ೧೧.೩೦ಕ್ಕೆ ಜನ್ನಾಪುರ ಜಯಶ್ರೀ ಕಲ್ಯಾಣ ಮಂಪಟ ಸಮೀಪದಲ್ಲಿರುವ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಗೀಸರ್ ಉದ್ಘಾಟಿಸಲಿದ್ದಾರೆ. ನಂತರ ೧೨ ಗಂಟೆಗೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಲಿದ್ದಾರೆ.
ಸಂಜೆ ೭ ಗಂಟೆಗೆ ಲಯನ್ಸ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಜಿಲ್ಲಾ ಗೌರ‍್ನರ್ ಬಿ. ದಿವಾಕರ ಶೆಟ್ಟಿ, ವಿಭಾಗ-೨, ವಲಯ-೨ರ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ಉಪಸ್ಥಿತರಿರುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್ ಅಧ್ಯಕ್ಷತೆ ವಹಿಸಲಿದ್ದಾರೆ.
No comments:
Post a Comment