ಯಾವುದೇ ಒಬ್ಬ ವ್ಯಕ್ತಿ ನಿರ್ಧಾರಕ್ಕೆ ಸಮುದಾಯದವರು ಬದ್ಧರಾಗಿಲ್ಲ : ಮುಖಂಡರ ಸ್ಪಷ್ಟನೆ
ಭದ್ರಾವತಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಛಲವಾದಿ ಸಮಾಜ ಹಾಗು ತಾಲೂಕು ಛಲವಾದಿ ಮಹಾಸಭಾ ಪ್ರಮುಖರು ಮಾತನಾಡಿದರು.
ಭದ್ರಾವತಿ, ಏ. ೨೮: ಛಲವಾದಿ ಸಮಾಜದವರು ಯಾವುದೇ ಒಬ್ಬ ವ್ಯಕ್ತಿ ನಿರ್ಧಾರಕ್ಕೆ ಬದ್ಧರಾಗಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಮೊದಲಿನಿಂದಲೂ ರಾಜಕೀಯವಾಗಿ ಸೂಕ್ತ ನಿರ್ಧಾರ ಕೈಗೊಂಡು ಸಮಾಜದ ಹಿತಕಾಪಾಡುವವರನ್ನು ಬೆಂಬಿಸಿಕೊಂಡು ಬರಲಾಗುತ್ತಿದೆ ಎಂದು ತಾಲೂಕು ಛಲವಾದಿ ಸಮಾಜ ಹಾಗು ತಾಲೂಕು ಛಲವಾದಿ ಮಹಾಸಭಾ ಪ್ರಮುಖರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ರಾಜಕೀಯವಾಗಿ ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ವೈಯಕ್ತಿಕವಾಗಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡಲಿ. ಆದರೆ ಸಮಾಜದ ಹೆಸರಿನಲ್ಲಿ ಬೆಂಬಲ ನೀಡುವುದು ಬೇಡ ಎಂದರು.
ಮೊದಲಿನಿಂದಲೂ ಸಮಾಜದ ಹಿತಕಾಪಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಬೆಂಬಲಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಛಲವಾದಿ ಸಮಾಜದ ಬೆಳವಣಿಗೆಗೆ ಹೆಚ್ಚಿನ ರೀತಿಯಲ್ಲಿ ಸಹಕರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಬೆಂಬಲಿಸಲು ಸಮಾಜ ನಿರ್ಧರಿಸಿದೆ. ಇದೆ ರೀತಿ ಛಲವಾದಿ ಮಹಾಸಭಾ ಸಹ ಸಂಗಮೇಶ್ವರ್‌ರವರನ್ನು ಬೆಂಬಲಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಚನ್ನಪ್ಪ, ಜಯರಾಜ್, ಎಸ್.ಎಸ್ ಭೈರಪ್ಪ, ಅರುಣ್, ಡಿ. ನರಸಿಂಹಮೂರ್ತಿ, ಸರ್ವಮಂಗಳ, ಮಹೇಶ್, ಸೀನಪ್ಪ ನಂಜಾಪುರ, ಪುಟ್ಟರಾಜ್, ರಾಜು, ಅದಿತ್ಯಶಾಮ್, ಲಕ್ಷ್ಮಣಪ್ಪ, ಗೋಪಾಲ್, ಲೋಕೇಶ್, ಕೆಂಪರಾಜ್, ಎಚ್.ಎಂ ಮಹಾದೇವಯ್ಯ, ಲೋಕೇಶ್(ಕೆಪಿಟಿಸಿಎಲ್) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment