ಭದ್ರಾವತಿ ಕ್ಷೇತ್ರದಾದ್ಯಂತ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಶನಿವಾರ ನಗರಸಭೆ ವಾರ್ಡ್ ನಂ.೨೬ರಲ್ಲಿ ಪಕ್ಷದ ಸ್ಥಳೀಯ ಪ್ರಮುಖರು ಪ್ರಚಾರ ನಡೆಸಿದರು.
ಭದ್ರಾವತಿ, ಏ. ೨೯: ಕ್ಷೇತ್ರದಾದ್ಯಂತ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಶನಿವಾರ ನಗರಸಭೆ ವಾರ್ಡ್ ನಂ.೨೬ರಲ್ಲಿ ಪಕ್ಷದ ಸ್ಥಳೀಯ ಪ್ರಮುಖರು ಪ್ರಚಾರ ನಡೆಸಿದರು.
ಬಾಲಭಾರತಿ, ನ್ಯೂಕಾಲೋನಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಬೆಂಬಲಿಸುವಂತೆ ಮತಯಾಚಿಸಿದರು.
ಪ್ರಮುಖರಾದ ಪರಮೇಶ್ವರಿ, ಪುಷ್ಪಾವತಿ, ಕೆ.ವಿ ಚಂದ್ರಣ್ಣ, ಅಂತೋಣಿದಾಸ್, ಭಾಸ್ಕರ್, ವಿಷ್ಣು, ಗಂಗಾ, ಬಾಸ್ಕರ್(ಎನ್‌ಆರ್‌ಎಂ), ಈಶ್ವರ್, ಟೋನಿ ಸೇರಿದಂತೆ ಇನ್ನಿತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ನಗರಸಭೆ ೩೫ ವಾರ್ಡ್‌ಗಳಲ್ಲೂ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಆಯಾ ಭಾಗದ ಮುಖಂಡರುಗಳು ಒಂದೆಡೆ ಸಭೆ ನಡೆಸಿ ಮತಯಾಚಿಸುತ್ತಿದ್ದಾರೆ. ಈ ನಡುವೆ ಇತರೆ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ.
No comments:
Post a Comment