ಭದ್ರಾವತಿ, ಮೇ. ೧೫ : ಭಾವಸಾರ ಕ್ಷತ್ರಿಯ ಸಮಾಜ ವತಿಯಿಂದ ಭೂತನಗುಡಿ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ೮೭ನೇ ವರ್ಷದ ದಿಂಡಿ ಮಹೋತ್ಸವ ಮೇ.೧೬ ರಿಂದ ೧೮ರವರೆಗೆ ನಡೆಯಲಿದೆ.
ಮೇ.೧೬ರ ಮಂಗಳವಾರ ಸಂಜೆ ೫ ಗಂಟೆಯಿಂದ ಶ್ರೀ ಸಂತಸಾಮ್ರಾಟ ಜ್ಞಾನದೇವರ ವಿರಚಿತ ಶ್ರೀ ಜ್ಞಾನೇಶ್ವರಿ ಗ್ರಂಥದ ಪೋಥೀ ಸ್ಥಾಪನೆ, ಬದರಿನಾಥ್ ಉತ್ತರ್‌ಕರ್‌ರವರಿಂದ ಭಜನೆ, ಕೀರ್ತನೆ ನಡೆಯಲಿದೆ. ೧೭ರಂದು ಮುಂಜಾನೆ ೫ ಗಂಟೆಯಿಂದ ಕಾಕಡಾರತಿ ಭಜನೆ, ಆರತಿ, ಆನಂತರ ಸಂಜೆ ೫ ಗಂಟೆಯಿಂದ ಸಾಮೂಹಿಕ ನಾಮಜಪ, ೫.೩೦ ರಿಂದ ಸಾಗರದ ಮಹೇಂದ್ರನಾಥ ರಂಗದೋಳ್‌ರವರಿಂದ ಶ್ರೀ ಜ್ಞಾನೇಶ್ವರಿ ಪ್ರವಚನ, ೭ ಗಂಟೆಯಿಂದ ಡಿ.ಆರ್ ಬಸಪ್ಪಮಾಸ್ತರ್‌ರವರಿಂದ ಪಂಢರಿ ಸಂಪ್ರದಾಯದ(ಕನ್ನಡ) ಕೀರ್ತನೆ, ರಾತ್ರಿ ೧೦.೩೦ರಿಂದ ಅಖಂಡ ಜಾಗರಣೆ ನಡೆಯಲಿದೆ. ಹಿಂದೂಸ್ತಾನಿ ಗ್ರಾಯಕರು, ದೂರದರ್ಶನ ಕಲಾವಿದರಾದ ಗೋಕರ್ಣ ವಿದ್ವಾನ್ ರಾಘವೇಂದ್ರ ಭಟ್, ಶಿವಮೊಗ್ಗ ವಿದ್ವಾನ್ ನಿಶಾದ್ ಹರ್ಲಾಪುರ್ ಹಾಗು ಅರುಣ್ ಅಂಬೇಕರ್ ಮತ್ತು ಸಿದ್ದೇಶ್ ಬಡಿಗೇರ್ ತಂಡದಿಂದ ಸಂತವಾಣಿ ಕಾರ್ಯಕ್ರಮ ನಡೆಯಲಿದೆ.
ಮೇ.೧೮ರ ಗುರುವಾರ ಮುಂಜಾನೆ ೫ ಗಂಟೆಯಿಂದ ಕಾಕಡಾರತಿ ಭಜನೆ, ಆರತಿ, ಬೆಳಿಗ್ಗೆ ೯ ಗಂಟೆಯಿಂದ ಶ್ರೀ ಪಾಂಡುರಂಗ ಶ್ರೀ ರಖುಮಾಯಿಮಾತೆಯರ ರಾಜಬೀದಿ ಉತ್ಸವ, ಆನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗದೊಂದಿಗೆ ಮಹಾಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಿಂಡಿ ಮಹೋತ್ಸವ ಯಶಸ್ವಿಗೊಳಿಸುವಂತೆ ಭಾವಸಾರ ಕ್ಷಿತ್ರಿಯ ಸಮಾಜ ಕೋರಿದೆ.
No comments:
Post a Comment