Sunday, June 18, 2023

ಸ್ಥಳಾಂತರಗೊಂಡ ಹ್ಯಾಪಿ ಲಿವಿಂಗ್ ಲೈಫ್ ಯೋಗ ಸೆಂಟರ್ ಉದ್ಘಾಟನೆ

ಭದ್ರಾವತಿ ಜನ್ನಾಪುರ ಅಪೋಲೋ ಮೆಡಿಕಲ್ ಮೇಲ್ಭಾಗದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಹ್ಯಾಪಿ ಲಿವಿಂಗ್ ಲೈಫ್ ಯೋಗ ಸೆಂಟರ್ ಉದ್ಘಾಟನೆ ಭಾನುವಾರ ನಡೆಯಿತು.
    ಭದ್ರಾವತಿ, ಜೂ. ೧೮: ನಗರದ ಜನ್ನಾಪುರ ಅಪೋಲೋ ಮೆಡಿಕಲ್ ಮೇಲ್ಭಾಗದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಹ್ಯಾಪಿ ಲಿವಿಂಗ್ ಲೈಫ್ ಯೋಗ ಸೆಂಟರ್ ಉದ್ಘಾಟನೆ ಭಾನುವಾರ ನಡೆಯಿತು.
    ಯೋಗ ಗುರು ಮಹೇಶ್, ಶಿಕ್ಷಕರಾದ ದ್ರಾಕ್ಷಾಯಿಣಿ ಮತ್ತು ಮಲ್ಲಿಕಾರ್ಜುನ್‌ರವರು ಯೋಗ ಕಲಿಕೆ ಮಹತ್ವ ವಿವರಿಸಿದರು. ವೇದಿಕೆಯಲ್ಲಿ ಬಬ್ಬೂರು ಕಮ್ಮೆ ಸೇವಾ ಸಂಘದ ನಂಜುಂಡಯ್ಯ, ರೈಫಲ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ, ಕಟ್ಟಡದ ಮಾಲೀಕ ಅಶೋಕ್ ಹಾಗು ಪತ್ರಕರ್ತ ಅನಂತಕುಮಾರ್ ಉಪಸ್ಥಿತರಿದ್ದರು.
    ಕಲಿಕಾರ್ಥಿಗಳಾದ ನಾಗಮಣಿ, ಲಕ್ಷ್ಮೀದೇವಿ, ಕಲ್ಪನಾ, ಲೋಕೇಶ್, ತಿಲಕಾ, ಪುಷ್ಪ, ಭಾಗ್ಯ, ಪಾರ್ವತಿ, ಮಂಜುಳ, ಶೈಲಾಶೆಟ್ಟಿ, ಸುಮ, ಮುನ್ನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment