ಭದ್ರಾವತಿ, ಜು. ೧೩ : ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ, ಲಯನ್ಸ್ ಕ್ಲಬ್ ಸುಗರ್ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ ಜು.೧೪ರಂದು ಸಂಜೆ ೭ ಗಂಟೆಗೆ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದಲ್ಲಿರುವ ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಲಿದೆ.
ಲಯನ್ಸ್ ಎಂಜೆಎಫ್ ರಾಜೀವ್ ಕೋಟ್ಯಾನ್ ಪದಗ್ರಹಣ ಬೋಧಿಸಲಿದ್ದು, ಆರ್. ಮದಿಯಲಗನ್ ಅಧ್ಯಕ್ಷತೆ ವಹಿಸಲಿದ್ದಾರೆ. ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಟಿ. ಶ್ರೀನಿವಾಸ್, ಕಾರ್ಯದರ್ಶಿಯಾಗಿ ಮಂಜುನಾಥ್ ಹಾಗು ಖಜಾಂಚಿಯಾಗಿ ಎಚ್.ಡಿ ಕೃಷ್ಣ ಪದಗ್ರಹಣ ಸ್ವೀಕರಿಸಲಿದ್ದಾರೆ.
No comments:
Post a Comment