ಭದ್ರಾವತಿ ತಾಲೂಕು ಶಂಕರ ಸಮಿತಿ ಸಂಚಾಲಕರಾದ ವೇದಬ್ರಹ್ಮ ಶ್ರಿ ಕೃಷ್ಣ ಮೂರ್ತಿ ಸೋಮಯಾಜಿ ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಭದ್ರಾವತಿ, ಜು. ೪ : ಜೀವನದಲ್ಲಿ ಗುರು ಕೃಪೆಯಿಂದ ಲೌಕಿಕ ಹಾಗೂ ಅಲೌಕಿಕ ಸಾಧನೆ ಗುರಿ ತಲುಪಲು ಸಾಧ್ಯ ಎಂದು ತಾಲೂಕು ಶಂಕರ ಸಮಿತಿ ಸಂಚಾಲಕರಾದ ವೇದಬ್ರಹ್ಮ ಶ್ರಿ ಕೃಷ್ಣಮೂರ್ತಿ ಸೋಮಯಾಜಿ ಹೇಳಿದರು.
ಅವರು ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು
ಗುರುಪೂರ್ಣಿಮೆ ಮಹತ್ವ ತಿಳಿಸಿಕೊಡಲಾಯಿತು. ಅಲ್ಲದೆ ಭಜನೆ ಹಾಗೂ ಅಷ್ಟೋತ್ತರ ಪಠಣ ನಡೆಯಿತು. ಜಯಲಕ್ಷ್ಮಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎನ್ ಎಸ್ ಸುಬ್ರಹ್ಮಣ್ಯ ಸ್ವಾಗತಿಸಿ, ಸ್ವರ್ಣ ನಾಗೇಂದ್ರ ವಂದಿಸಿದರು
No comments:
Post a Comment