ಭದ್ರಾವತಿ, ಜು. ೨೦ : ನಗರಸಭೆ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳಲು ಒಟ್ಟು ೧೫ ಕೇಂದ್ರಗಳು ಹಾಗು ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
ವಾರ್ಡ್ ನಂ.೧ರ ಹೆಬ್ಬಂಡಿ, ೨೫ರ ಹುಡ್ಕೋಕಾಲೋನಿ, ಹಳೇಬುಳ್ಳಾಪುರ, ೨೬ರ ಬಾಲಭಾರತಿ, ಬೆಣ್ಣೆಕೃಷ್ಣ ಸರ್ಕಲ್ ಮತ್ತು ೨೯ರ ಕಿತ್ತೂರು ರಾಣಿ ಚೆನ್ನಮ್ಮ ಲೇಔಟ್, ೩೦ರ ಸಿದ್ದಾಪುರ ಮತ್ತು ೩೧ರ ಜಿಂಕ್ ಲೈನ್ ನಿವಾಸಿಗಳಿಗೆ ಹೊಸ ಸಿದ್ದಾಪುರ ತಾಲೂಕು ಮಾಜಿ ಸೈನಿಕರ ಸಂಘ ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ. ಸಮುದಾಯ ಸಂಘಟಕಿ ಸುಮಿತ್ರ ಹರಪ್ಪನಹಳ್ಳಿ, ಮೊ: ೭೦೧೯೫೬೭೫೨೩ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೧೯ರ ಎಂಪಿಎಂ ಆಸ್ಪತ್ರೆ, ೨೦ರ ಸುರಗಿತೋಪು, ೨೧ರ ಎಂಪಿಎಂ ೬ ಮತ್ತು ೮ನೇ ವಾರ್ಡ್, ೨೨ರ ಉಜ್ಜನಿಪುರ, ೨೩ರ ತಿಮ್ಲಾಪುರ ಮತ್ತು ದೊಡ್ಡಗೊಪ್ಪೇನ ಹಳ್ಳಿ (ಡಿ.ಜೆ ಹಳ್ಳಿ) ಹಾಗು ೨೪ರ ಬೊಮ್ಮನಕಟ್ಟೆ ನಿವಾಸಿಗಳಿಗೆ ಸುರಗಿತೋಪು ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ. ಸಮುದಾಯ ಸಂಘಟಕ ರವಿಕುಮಾರ್, ಮೊ: ೯೬೮೬೯೧೩೮೬೬ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೨ರ ಲೋಯರ್ ಹುತ್ತಾ, ೨೭ರ ಆಂಜನೇಯ ಆಗ್ರಹಾರ, ಕೂಲಿಬ್ಲಾಕ್ ಶೆಡ್, ೨೮ರ ಗಣೇಶ್ ಕಾಲೋನಿ, ೩೨ರ ಜನ್ನಾಪುರ, ೩೩ರ ಹುತ್ತಾ ಕಾಲೋನಿ, ೩೪ರ ಅಪ್ಪರ್ ಹುತ್ತಾ, ಸಂಜಯ್ ಕಾಲೋನಿ, ೩೫ರ ಭಂಡಾರಹಳ್ಳಿ ನಿವಾಸಿಗಳಿಗೆ ಜನ್ನಾಪುರ ಎನ್‌ಟಿಬಿ ಕಛೇರಿಯಲ್ಲಿ ಕೇಂದ್ರ ತೆರೆಯಲಾಗಿದೆ. ದ್ವಿತೀಯ ದರ್ಜೆ ಸಹಾಯಕ ವೆಂಕಟೇಶ್, ಮೊ: ೯೮೮೦೦೪೫೭೦೧ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೩ರ ಬಿ.ಎಚ್ ರಸ್ತೆ ಎಡ ಮತ್ತು ಬಲ, ೪ರ ಕನಕಮಂಟಪ ಪ್ರದೇಶ, ೫ರ ಕೋಟೆ ಏರಿಯಾ, ೬ರ ಸಿದ್ಧಾರೂಢ ನಗರ, ೭ರ ಅನ್ವರ್ ಕಾಲೋನಿ, ೮ರ ಸೀಗೆಬಾಗಿ, ೯ರ ಭದ್ರಾ ಕಾಲೋನಿ, ೧೭ರ ನೆಹರು ನಗರ ಮತ್ತು ೧೮ರ ಎಂ.ಎಂ ಕಾಂಪೌಂಡ್ ನಿವಾಸಿಗಳಿಗೆ ಟಿ.ಕೆ ರಸ್ತೆ, ನಗರಸಭಾ ಕಾರ್ಯಾಲಯದಲ್ಲಿ ಕೇಂದ್ರ ತೆರೆಯಲಾಗಿದೆ. ದ್ವಿತೀಯ ದರ್ಜೆ ಸಹಾಯಕ ಸಾಗರ್ ಬಾಬು, ಮೊ: ೮೮೬೧೨೯೫೦೩೪ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೧೦ರ ಅಶ್ವಥ್ ನಗರ, ೧೧ರ ಸುಭಾಷ್ ನಗರ, ೧೨ರ ಅಣ್ಣಾನಗರ, ೧೩ರ ಭೂತನಗುಡಿ, ೧೪ರ ಹೊಸಭೋವಿ ಕಾಲೋನಿ, ೧೫ರ ಹೊಸಮನೆ ಬಲಭಾಗ ಮತ್ತು ೧೬ರ ಗಾಂಧಿನಗರ ನಿವಾಸಿಗಳಿಗೆ ಹೊಸಮನೆ ಹಿಂದೂ ಮಹಾಸಭಾ ಗಣಪತಿ ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ. ನೀರು ಸರಬರಾಜು ಸಹಾಯಕ ಮಹೇಶ್, ಮೊ: ೯೯೦೭೭೮೪೪೭೨ ನೋಡಲ್ ಅಧಿಕಾರಿಯಾಗಿದ್ದಾರೆ.
ಉಳಿದಂತೆ ಕರ್ನಾಟಕ ಒನ್ ಕೇಂದ್ರಗಳಾದ ಸಾಬ್‌ಜಾನ್ ಸ್ಟೋರ್ ಬಿಲ್ಡಿಂಗ್, ಬಿ.ಎಚ್ ರಸ್ತೆ, ಕರವಸೂಲಿಗಾರ ಜಯಂತಿ, ಮೊ: ೯೪೪೯೩೪೯೮೫೭ ನೋಡಲ್ ಅಧಿಕಾರಿಯಾಗಿದ್ದಾರೆ. ಐಜಾ ಡಿಜಿಟಲ್ ಸರ್ವಿಸ್, ತಾಲೂಕು ಕಛೇರಿ ಮುಂಭಾಗ, ಕರವಸೂಲಿಗಾರ ಡಿ.ಎಸ್ ಹೇಮಾಂತರ್, ಮೊ: ೯೬೨೦೪೭೮೬೮೯ ನೋಡಲ್ ಅಧಿಕಾರಿಯಾಗಿದ್ದಾರೆ. ಜೆಎಂಎಫ್‌ಸಿ ನ್ಯಾಯಾಲಯ ಮುಂಭಾಗ, ಕರವಸೂಲಿಗಾರ ಚೇತನ್‌ಕುಮಾರ್, ಮೊ: ೯೮೮೦೫೬೬೪೫೫ ನೋಡಲ್ ಅಧಿಕಾರಿಯಾಗಿದ್ದಾರೆ. ಮತ್ತು ಹೊಸಮನೆ ಮುಖ್ಯರಸ್ತೆ, ಶಿವಾಜಿ ಸರ್ಕಲ್ ಶ್ರೀ ವೆಂಕಟೇಶ್ವರ ಸೇವಾ ಕೇಂದ್ರ, ಕರವಸೂಲಿಗಾರ ರವಿಪ್ರಸಾದ್, ಮೊ: ೯೧೧೩೨೫೪೪೬೨ ನೋಡಲ್ ಅಧಿಕಾರಿಯಾಗಿದ್ದಾರೆ.
ಸಾರ್ವಜನಿಕರು ಸುಲಭವಾಗಿ ನೋಂದಾಯಿಸಿಕೊಳ್ಳುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಅರ್ಹ ಫಲಾನುಭವಿಗಳು ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗು ಸಂಪರ್ಕಗೊಂಡಿರುವ ಬ್ಯಾಂಕ್ ಖಾತೆ ವಿವರ ನೀಡುವ ಮೂಲಕ ಯಾವುದೇ ಶುಲ್ಕ ಭರಿಸದೆ ಯಾವುದೇ ಸಮಯದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.
No comments:
Post a Comment