ಭದ್ರಾವತಿಯಲ್ಲಿ ತಾಲೂಕು ಕಛೇರಿ ಹಾಗು ಕಂದಾಯ ಇಲಾಖೆ ಸಹಕಾರದೊಂದಿಗೆ ಪೌರಾಯುಕ್ತ ಮನುಕುಮಾರ್ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸುಮಾರು ೮ ಎಕರೆ ೩೨ ಗುಂಟೆ ವಿಸ್ತೀಣವುಳ್ಳ ಸರ್ವೆ ನಂ. ೧೩೩ರ ಕೆರೆ ಸರ್ವೆ ಕಾರ್ಯ ಈ ಹಿಂದೆ ನಡೆದಿದ್ದು, ಸುಮಾರು ೧ ಎಕರೆ ಒತ್ತುವರಿಯಾಗಿರುವ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಇದೀಗ ತೆರವು ಕಾರ್ಯಾಚರಣೆ ನಡೆಸಲಾಯಿತು.
ಭದ್ರಾವತಿ, ಜು. ೧೨ : ಪುನಃ ಕೆರೆ ಒತ್ತುವರಿ ಕಾರ್ಯಾಚರಣೆ ಆರಂಭಗೊಂಡಿದ್ದು, ಸಿದ್ದಾಪುರ ಕಸಬಾ ಹೋಬಳಿ ಸಂಕ್ಲಿಪುರ ಸರ್ವೆ ನಂ. ೧೩೩ ಕೆರೆ ಒತ್ತುವರಿ ಕಾರ್ಯಾಚರಣೆ ಯಶಸಿಯಾಗಿ ಕೈಗೊಳ್ಳಲಾಯಿತು.
ತಾಲೂಕು ಕಛೇರಿ ಹಾಗು ಕಂದಾಯ ಇಲಾಖೆ ಸಹಕಾರದೊಂದಿಗೆ ಪೌರಾಯುಕ್ತ ಮನುಕುಮಾರ್ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸುಮಾರು ೮ ಎಕರೆ ೩೨ ಗುಂಟೆ ವಿಸ್ತೀಣವುಳ್ಳ ಸರ್ವೆ ನಂ. ೧೩೩ರ ಕೆರೆ ಸರ್ವೆ ಕಾರ್ಯ ಈ ಹಿಂದೆ ನಡೆದಿದ್ದು, ಸುಮಾರು ೧ ಎಕರೆ ಒತ್ತುವರಿಯಾಗಿರುವ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಇದೀಗ ತೆರವು ಕಾರ್ಯಾಚರಣೆ ನಡೆಸಲಾಯಿತು.
ಕೆರೆ ಗಡಿ ಗುರುತು ಮಾಡಿರುವ ಸ್ಥಳದಲ್ಲಿ ಜೆಸಿಬಿ ಬಳಸಿ ಟ್ರಂಚ್ ಒಡೆಯಲಾಗಿದೆ. ನಗರಸಭೆ ವ್ಯಾಪ್ತಿ ಬಹಳಷ್ಟು ಕೆರೆಗಳು ಒತ್ತುವರಿಯಾಗಿದ್ದು, ಈಗಾಗಲೇ ಗಡಿ ಗುರುತು ಮಾಡಲಾಗಿದೆ. ಒತ್ತುವರಿ ಮಾಡಿರುವವರು ಈಗಾಗಲೇ ತೆರವುಗೊಳಿಸಿದ್ದು, ಕೆಲವು ಕೆರೆಗಳ ಬಳಿ ತೆರವು ಮಾಡಿಲ್ಲ. ಈ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿದೆ.
ಈ ಹಿಂದಿನ ನಗರಸಭೆ ಪೌರಾಯುಕ್ತರಾಗಿದ್ದ ಮನೋಹರ್ ಸಹ ಕೆರೆ ತೆರವು ಕಾರ್ಯಾಚರಣೆಯಲ್ಲಿ ಹೆಚ್ಚಿನ ಆಸಕ್ತಿವಹಿಸಿದ್ದರು. ಇದೀಗ ಇಂದಿನ ಪೌರಾಯುಕ್ತ ಮನುಕುಮಾರ್ ಸಹ ಕೆರೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
-------------------------------------------------------------------------------------------
ನಗರಸಭೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೆರೆಗಳ ಸರ್ವೆ ಕಾರ್ಯ ನಡೆಸಿ ಗಡಿ ಗುರಿತಿಸಲಾಗಿದೆ. ಇದೀಗ ತಾಲೂಕು ಕಛೇರಿ ಹಾಗು ಕಂದಾಯ ಇಲಾಖೆ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ತೆರವು ಕಾರ್ಯಾಚರಣೆಗೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಹಂತ ಹಂತವಾಗಿ ತೆರವು ಕಾರ್ಯಾಚರಣೆ ನಡೆಯಲಿದೆ.
- ಮನುಕುಮಾರ್, ಪೌರಾಯುಕ್ತ, ನಗರಸಭೆ, ಭದ್ರಾವತಿ.
No comments:
Post a Comment