ಭದ್ರಾವತಿ, ಆ. ೧೯: ತಾಲೂಕಿನ ಬಿ.ಆರ್ ಪ್ರಾಜೆಕ್ಟ್ ಪತ್ರ ಸಂಸ್ಕೃತಿ ಸಂಘಟನೆ ವತಿಯಿಂದ ಆ.೨೦ರಂದು ಬೆಳಿಗ್ಗೆ ೧೦.೩೦ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಜಿ.ಆರ್ ಕುಂಭಾರ್ ಅವರ ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡ ʻಚಾರುಲತೆʼ(ನಾಟಕ), ಪ್ರವೀಣ್ ಎಂ. ಕಾರ್ಗಡಿ ಅವರ ʻನಡುರಾತ್ರಿಯ ನವಿಲುʼ(ಕವನ ಸಂಕಲನ) ಮತ್ತು ಜಿ.ಎಸ್ ಕುಂಭಾರ್ ಅವರ ʻನೂರೊಂದು ಕಥೆಗಳುʼ(ಚಿಂತನೆಗಾಗಿ) ಕೃತಿಗಳು ಪುಸ್ತಕ ಬಿಡುಗಡೆಗೊಳ್ಳಲಿವೆ.
ಸಮಾರಂಭದಲ್ಲಿ ಕೊಟ್ಟೂರು ಸಾಹಿತಿ ಕುಂ. ವೀರಭದ್ರಪ್ಪ(ಕುಂವೀ), ಬೆಂಗಳೂರಿನ ಕವಿ ಡಾ. ಕೂಡ್ಲೂರು ವೆಂಕಟಪ್ಪ, ಶ್ರವಣಬೆಳಗೊಳ ಸಾಹಿತಿ ವಸುಮತಿ ಜೈನ್, ಮಹಾರಾಷ್ಟ್ರ ಗಡಿನಾಡ ಕನ್ನಡಿಗ ಸಾಹಿತಿ ಗುರುಪಾದ ಎಸ್. ಕುಂಭಾರ್, ಹೊಸನಗರದ ಪ್ರವೀಣ್ ಎಂ. ಕಾರ್ಗಡಿ ಮತ್ತು ಬಿ.ಆರ್ ಪ್ರಾಜೆಕ್ಟ್ ನಿವೃತ್ತ ಇಂಜಿನಿಯರ್, ಸಾಹಿತಿ ಹೊಸಹಳ್ಳಿ ದಾಳೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
No comments:
Post a Comment