Sunday, August 6, 2023

ಪಾರ್ವತಿ ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ಕಾಂಗ್ರೆಸ್‌ ಪಕ್ಷದಿಂದ ಸನ್ಮಾನ, ಅಭಿನಂದನೆ

ಭದ್ರಾವತಿ ಜನ್ನಾಪುರ ನಿವಾಸಿ ಜ್ಯೋತಿ ಎಸ್ ಸಾಲೇರ-ಐಶ್ವರ್ಯ ದಂಪತಿ ಪುತ್ರಿ  ಪಾರ್ವತಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಭದ್ರಾವತಿಗೆ ಕೀರ್ತಿ ತಂದಿದ್ದು, ಇವರನ್ನು ಭಾನುವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೬: ಜನ್ನಾಪುರ ನಿವಾಸಿ ಜ್ಯೋತಿ ಎಸ್ ಸಾಲೇರ-ಐಶ್ವರ್ಯ ದಂಪತಿ ಪುತ್ರಿ  ಪಾರ್ವತಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಭದ್ರಾವತಿಗೆ ಕೀರ್ತಿ ತಂದಿದ್ದು, ಇವರನ್ನು ಭಾನುವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಬ್ಲಾಕ್‌ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್‌ ನೇತೃತ್ವದಲ್ಲಿ ಪಾರ್ವತಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂತೋನಿ ವಿಲ್ಸನ್, ಮುಖಂಡರಾದ ದೇವು, ನಾಗರಾಜ್‌, ಸೈಯದ್‌  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಿಶೇಷ ಎಂದರೆ ಪಾರ್ವತಿಯವರು ಕ್ಷೇತ್ರದ ಮಾಜಿ ಶಾಸಕ ದಿವಂಗತ ಸಾಲೇರ ಸಿದ್ದಪ್ಪನವರ ಮೊಮ್ಮಗಳು. ಇವರಿಗೆ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಗಣ್ಯರು ಅಭಿನಂದಿಸಿದ್ದಾರೆ.

No comments:

Post a Comment