Sunday, August 6, 2023

ಪುರಸಭೆ ಮಾಜಿ ಸದಸ್ಯ ಟಿ.ವಿ ಗೋವಿಂದಸ್ವಾಮಿ ನಿಧನ

ಟಿ.ವಿ ಗೋವಿಂದಸ್ವಾಮಿ
    ಭದ್ರಾವತಿ, ಆ. 6 : ಹಳೇನಗರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ರಥ ಬೀದಿ ರಸ್ತೆ ನಿವಾಸಿ, ಪುರಸಭೆ ಮಾಜಿ ಸದಸ್ಯ ಟಿ.ವಿ ಗೋವಿಂದಸ್ವಾಮಿ(70) ಭಾನುವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರಿ ಹಾಗು ಇಬ್ಬರು ಪುತ್ರರು ಇದ್ದಾರೆ. ಗೋವಿಂದಸ್ವಾಮಿ ಬೆಂಗಳೂರಿನಲ್ಲಿ ನಿಧನ ಹೊಂದಿದ್ದು, ಸೋಮವಾರ ಇವರ ಅಂತ್ಯಕ್ರಿಯೆ ನಡೆಯಲಿದೆ.
    ಗೋವಿಂದಸ್ವಾಮಿ ಹಿರಿಯ ಕಾಂಗ್ರೆಸ್‌ ಮುಖಂಡರಾಗಿದ್ದು, 2 ಬಾರಿ ಪುರಸಭೆ ಸದಸ್ಯರಾಗಿ, ಒಂದು ಬಾರಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಲಿಜ ಸಮಾಜದ ಮುಖಂಡರಾಗಿ ಸಹ ಗುರುತಿಸಿಕೊಂಡಿದ್ದರು.
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್‌, ಕಾಂಗ್ರೆಸ್‌ ಪಕ್ಷದ ಮುಖಂಡರು, ಜಲಿಜ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

No comments:

Post a Comment