Tuesday, August 29, 2023

ಭದ್ರಾವತಿ ವಿವಿಧೆಡೆ ಜಿಲ್ಲಾ ಯೋಜನಾ ನಿರ್ದೇಶಕರ ಭೇಟಿ : ಪರಿಶೀಲನೆ

ಶಿವಮೊಗ್ಗ ಜಿಲ್ಲಾ ನಿರ್ದೇಶಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಅಧಿಕಾರಿ ಮನೋಹರ್ ಅವರು ಮಂಗಳವಾರ ಭದ್ರಾವತಿ ನಗರದ ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೨೯ : ಶಿವಮೊಗ್ಗ ಜಿಲ್ಲಾ ನಿರ್ದೇಶಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಅಧಿಕಾರಿ ಮನೋಹರ್ ಅವರು ಮಂಗಳವಾರ ನಗರದ ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
    ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾ ಭವನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ಹಾಗು ಕನಕಮಂಟಪ ಮೈದಾನದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಪೌರಕಾರ್ಮಿಕರ ವಸತಿ ಸಮುಚ್ಚಯ ಹಾಗು ಪುಟ್ ಪಾತ್ ಪರಿಶೀಲನೆ ನಡೆಸಿದರು.

    ನಗರಸಭೆ ಕಂದಾಯಾಧಿಕಾರಿ ರಾಜ್ ಕುಮಾರ್, ಕಿರಿಯ ಇಂಜಿನಿಯರ್ ಗಳಾದ ಕೆ. ಪ್ರಸಾದ್, ಸಂತೋಷ್ ಪಾಟೀಲ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಡಿ. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

3 comments:

  1. ಹೊಸಮನೆ ಮುಖ್ಯ ರಸ್ತೆ ಕಾಂಕ್ರೀಟ್ ರಸ್ತೆ ಮಾಡಿ 3 ವರ್ಷ ಆಯಿತು ನಾನಾ ಕಾರಣಗಳಿಗೆ ಪದೇ ಪದೇ ರಸ್ತೆ ಅಂಚಿನಲ್ಲಿ ಅಥವಾ ಮದ್ಯೆ ಸಣ್ಣ ಕಾರಣಗಳಿಂದ ಯಂತ್ರದ ಸಹಾಯದಿಂದ ಕೊರೆದು ತಮ್ಮ ಕೆಲಸ. ಆದಮೇಲೆ ಪುನಃ ಮೊದಳಿನ ರೂಪಕ್ಕೆ ತರದೆ ಹಾಗೆಯೇ ಹೋಗುತ್ತಾರೆ.ಒಂದು ದೀರ್ಘಾವಧಿ ಗುಣಮಟ್ಟದ ಕಾಮಗಾರಿ ಮಾಡುವಾಗ ದೂರದೃಷ್ಟಿ ಇರಬೇಕು ಎಂಬ ತಿಳುವಳಿಕೆ ಬೇಕು

    ReplyDelete
    Replies
    1. In jannapura Ganesh colony main road near union Bank duct was constructed 8 to 10 months back along with concrete road work from Ganapathi ganapathi temple to Malleshwara sabhabhavan the duct was not completed and slopes are not provided for easy movement of vehicles.so many vehicles are met with an accident please arrange to rectify at the earlest

      Delete