ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ಇಂಜಿನಿಯರಿಂಗ್ ಪರೀಕ್ಷೆಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಭದ್ರಾವತಿ ನಗರದ ಜನ್ನಾಪುರ ನಿವಾಸಿ ಪಾರ್ವತಿ ಸಾಲೇರ .ಜೆ ಅವರನ್ನು ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಆ. ೨೨: ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ಇಂಜಿನಿಯರಿಂಗ್ ಪರೀಕ್ಷೆಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ನಗರದ ಜನ್ನಾಪುರ ನಿವಾಸಿ ಪಾರ್ವತಿ ಸಾಲೇರ .ಜೆ ಅವರನ್ನು ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಪಾರ್ವತಿ ಸಾಲೇರ .ಜೆ ಅವರು ಜಮೀನ್ದಾರ್ ಜ್ಯೋತಿ ಸಾಲೇರ .ಎಸ್ ಹಾಗು ಐಶ್ವರ್ಯ ದಂಪತಿಯ ಪುತ್ರಿಯಾಗಿದ್ದು, ಇವರು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ೬ ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್ ಪಡೆದುಕೊಂಡು ಕೀರ್ತಿತಂದಿದ್ದಾರೆ. ವಿಶೇಷವಾಗಿ ಪಾರ್ವತಿಯವರು ಕ್ಷೇತ್ರದಲ್ಲಿ ೨ ಬಾರಿ ಶಾಸಕರಾಗಿ ನಿಧನ ಹೊಂದಿರುವ ಸಾಲೇರ ಎಸ್ ಸಿದ್ದಪ್ಪ ಅವರ ಮೊಮ್ಮಗಳು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಇವರ ಸಾಧನೆಯನ್ನು ಅಭಿನಂದಿಸಿ ದೇವಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಧರ್ಮಗುರು ಫಾದರ್ ಲಾನ್ಸಿ ಡಿಸೋಜ, ಕಾರ್ಯದರ್ಶಿ ಅಂತೋಣಿ ವಿಲ್ಸನ್, ಸೈಂಟ್ ಚಾರ್ಲ್ಸ್ ಸಂಸ್ಥೆಯ ಸುಪೀರಿಯರ್ ಸಿಸ್ಟರ್ ಜೆಸಿಂತಾ ಡಿಸೋಜಾ, ವ್ಯಾಲೆಂಟೀನಾ ಸಿಕ್ವೆರಾ, ಆರ್.ಎಸ್ ಪೀಟರ್ ಜೋಸೆಫ್, ಅಂತೋನಿ ಕ್ರೂಸ್ , ಸಲಿನ್ ಗೊನ್ಸಲ್ವಿಸ್, ರೋಸಿ ಡಿಸೋಜ, ನಿರ್ಮಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment