ಭದ್ರಾವತಿ : ಹಳೇನಗರ ಕನಕ ನಗರದ ವಿವೇಕಾನಂದ ಯೋಗ ಕೇಂದ್ರದ ವತಿಯಿಂದ ಅಂತರಾಷ್ಟ್ರೀಯ ಯೋಗ ಗುರು ಡಿ.ನಾಗರಾಜ್ ಅವರಿಂದ ಸೆ.11 ರಿಂದ ನಿರಂತರವಾಗಿ ಯೋಗ, ದ್ಯಾನ , ಪ್ರಾಣಾಯಾಮ ತರಬೇತಿ ನಡೆಯಲಿದೆ.
8 ರಿಂದ 80 ವರ್ಷದೊಳಗಿನವರು ತರಗತಿಗೆ ಸೇರಲು ಅವಕಾಶವಿರುತ್ತದೆ.
ಯೋಗದಿಂದ ಹಲವು ಖಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಬೆನ್ನು ನೋವು, ಸೊಂಡ ನೋವು, ತಲೆ ನೋವು, ರಕ್ತದ ಒತ್ತಡ, ಸಕ್ಕರೆ ಖಾಯಿಲೆ, ಹೃದಯದ ತೊಂದರೆ, ಗ್ಯಾಸ್ಟ್ರಿಕ್ ಸೇರಿದಂತೆ ಇನ್ನು ಅನೇಕ ಖಾಯಿಲೆಗಳಿಗೆ ವಿಶೇಷ ಯೋಗ ತರಬೇತಿಯಿಂದ ಮುಕ್ತಿ ಹೊಂದಬಹುದಾಗಿದೆ.
ಉದ್ವೇಗ, ಭಯ, ಕೋಪ, ಚಂಚಲತೆ, ಮರವು, ಸದಾ ಚಟುವಟಿಕೆಯಿಂದ ಕೆಲಸ ಮಾಡಲು
ದಿನವಿಡಿ ಸಂತೋಷದಿಂದ, ನೆಮ್ಮದಿಯಿಂದ ಇರಲು ಯೋಗ ಸಹಕಾರಿಯಾಗಿದೆ.
ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬೆಳಗ್ಗೆ 6 ರಿಂದ 7.15ರವರೆಗೆ ತರಬೇತಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಯೋಗ ಗುರು ಡಿ ನಾಗರಾಜ್ ಹಾಗೂ ಶ್ರೀಮತಿ ಚಂದ್ರಕಲಾ ಮೊ 9449986209, 9916608787 ಸಂಪರ್ಕಿಸಬಹುದಾಗಿದೆ.
No comments:
Post a Comment