Sunday, September 10, 2023

ಸೆ.11ರಂದು ನಗರಸಭೆ ಮುಂಭಾಗ ಪ್ರತಿಭಟನೆ

ಭದ್ರಾವತಿ: ಕಂದಾಯ ಜಾಗದಲ್ಲಿ ಅನಧಿಕೃತವಾಗಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಮತ್ತು ಮನೆ ನಿರ್ಮಿಸುತ್ತಿರುವುದನ್ನು ತಡೆಯುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಸಾರ್ವಜನಿಕರ ಹಿತರಕ್ಷಣಾ ವೇದಿಕೆ ಮತ್ತು ಆದಿಜಾಂಭವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೆ.11ರಂದು ಬೆಳಿಗ್ಗೆ 10.30ರಿಂದ ನಗರಸಭೆ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
  ಸಿದ್ದರೂಢನಗರ, ವಾರ್ಡ್ ನಂ.6ರ 1ನೇ ಕ್ರಾಸ್‌ನಲ್ಲಿರುವ ಸಿದ್ದರೂಢ ಮಠದ ಹಿಂಭಾಗದಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೆ ನಗರಸಭೆಯ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ
ಕಂದಾಯ ಜಾಗದಲ್ಲಿ ಅನಧಿಕೃತವಾಗಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಮತ್ತು ಮನೆ ನಿರ್ಮಿಸುತ್ತಿದ್ದು, ಆ ನಿವೇಶನಕ್ಕೆ
ಸಂಬಂಧಪಟ್ಟಂತೆ ನಗರಸಭೆಯಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಕೂಡ ನಗರಸಭೆ ವತಿಯಿಂದ ಅವಕಾಶ ಮಾಡಿಕೊಡಲಾಗಿದೆ. .
 ಈ ಸಂಬಂಧ ಆ.31ರಂದು ನಗರಸಭೆ ಆಯುಕ್ತರಿಗೆ ಮತ್ತು ಸೆ. 1ರಂದು ಜಿಲ್ಲಾಧಿಕಾರಿಗೆ ದೂರನ್ನು ಸಲ್ಲಿಸಿದ್ದು ಹಾಗೂ ಸೆ.8ರಂದು ವಕೀಲರ ಮೂಲಕ ಅನಧಿಕೃತ ಕಟ್ಟಡ ತಡೆಹಿಡಿಯುವ ಬಗ್ಗೆ ನೋಟೀಸ್‌ನ್ನು ಸಹ ನೀಡಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

No comments:

Post a Comment