ಭದ್ರಾವತಿ ಉಂಬ್ಳೆಬೈಲು ರಸ್ತೆ, ಸಂಜಯ್ ನಗರದ ಬಳಿ ಸಂಜಯ್ ಯುವಕರ ಸಂಘ ಈ ಬಾರಿ ಚಂದ್ರಯಾನ-3 ಸಾಧನೆ ಬಿಂಬಿಸುವ ವಿಶಿಷ್ಟವಾದ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಭದ್ರಾವತಿ: ಚಂದ್ರಯಾನ-3 ಸಾಧನೆ ಭಾರತ ದೇಶವನ್ನು ಇಡೀ ಜಗತ್ತು ತಿರುಗಿ ನೋಡುವತೆ ಮಾಡಿದೆ. ಇಂತಹ ಅದ್ಭುತ ಸಾಧನೆಯನ್ನು ಗಣೇಶ ಚತುರ್ಥಿಯಲ್ಲಿ ಯುವಕರ ತಂಡವೊಂದು ಸದ್ಬಳಕೆ ಮಾಡಿಕೊಂಡು ಗಮನ ಸೆಳೆಯುತ್ತಿದೆ.
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮೂಲಕ ರೋವರ್ ಇಳಿಯುತ್ತಿರುವುದು. ದೇಶದ ತ್ರಿವರ್ಣ ಧ್ವಜ
ಹಿಡಿದು ಗಗನಯಾತ್ರಿ ವೇಷಧಾರಿಯಾಗಿ ಇದನ್ನು ವಿಘ್ನ ನಿವಾರಕ ಗಣೇಶ ಯಶಸ್ಸಿನ ಸಂಕೇತ
ಪ್ರದರ್ಶಿಸುತ್ತಿರುವುದು. ಮತ್ತೊಂದೆಡೆ ಭವಿಷ್ಯದಲ್ಲಿ ಮಾನವ ಚಂದ್ರನ ಮೇಲೆ ನೆಲೆಸುವ ಕನಸು
ನನಸಾಗಿಸುವ ಚಿತ್ರಣ ತೆರೆದಿಟ್ಟಿರುವುದು ಭಕ್ತರ ಗಮನ ಸೆಳೆಯುತ್ತಿದೆ.
ಇಲ್ಲಿನ ಯುವಕರು ಪ್ರತಿವರ್ಷ ವಿಭಿನ್ನವಾದ, ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಗಮನ ಸೆಳೆಯುತ್ತಿದ್ದಾರೆ.
No comments:
Post a Comment