ಚೀನಾದ ಹಾಂಗಝೌನಲ್ಲಿ ಜರುಗಿದ ೪ನೇ ಏಷ್ಯನ್ ಪ್ಯಾರಾ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತ ತಂಡದ ಕ್ರೀಡಾಪಟುಗಳು ೧,೫೦೦ ಮೀಟರ್ ಓಟದಲ್ಲಿ ಚಿನ್ನ ಹಾಗು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಭದ್ರಾವತಿ : ಚೀನಾದ ಹಾಂಗಝೌನಲ್ಲಿ ಜರುಗಿದ ೪ನೇ ಏಷ್ಯನ್ ಪ್ಯಾರಾ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತ ತಂಡದ ಕ್ರೀಡಾಪಟುಗಳು ೧,೫೦೦ ಮೀಟರ್ ಓಟದಲ್ಲಿ ಚಿನ್ನ ಹಾಗು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ರಕ್ಷಿತಾ ಚಿನ್ನ ಹಾಗು ಲಲಿತಾ ಬೆಳ್ಳಿ ಪದಕ ತಮ್ಮದಾಗಿಸಿಕೊಂಡು ದೇಶಕ್ಕೆ ಕೀರ್ತಿ ತಂದಿದ್ದಾರೆ. ತರಬೇತಿದಾರ ರಾಹುಲ್ .ಬಿ ಮತ್ತು ನಗರದ ಹೊಸಮನೆ ನಿವಾಸಿ ಸಾವಂತ್‌ರವರ ಪುತ್ರಿ, ಸಹಾಯಕ ತರಬೇತಿದಾರರಾದ ಸೌಮ್ಯ ಸಾವಂತ್ ಹಾಗು ಗೈಡ್ ರನ್ನರ್ ತಬ್ರೇಶ್ ಅವರೊಂದಿಗೆ ತಂಡ ಪಂದ್ಯಾವಳಿ ಪಾಲ್ಗೊಂಡಿತ್ತು. ವಿಜೇತ ಕ್ರೀಡಾಪಟುಗಳನ್ನು ನಗರದ ಗಣ್ಯರು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.
No comments:
Post a Comment