Saturday, November 4, 2023

ವಿಐಎಸ್‌ಎಲ್ ಶತಮಾನೋತ್ಸವ : ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

ಭದ್ರಾವತಿ  ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಎರಡು ದಿನಗಳ ಹಮ್ಮಿಕೊಳ್ಳಲಾಗಿರುವ ಶತಮಾನೋತ್ಸವದಲ್ಲಿ ಶನಿವಾರ ಸಂಜೆ  ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಎರಡು ದಿನಗಳ ಹಮ್ಮಿಕೊಳ್ಳಲಾಗಿರುವ ಶತಮಾನೋತ್ಸವದಲ್ಲಿ ಶನಿವಾರ ಸಂಜೆ  ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ನಾಡು-ನುಡಿ, ಜಾತಿ-ಧರ್ಮ, ಸಂಸ್ಕೃತಿ ಹಾಗು ಪರಂಪರೆ ಬಿಂಬಿಸುವ ಹಲವು ನೃತ್ಯ ರೂಪಕಗಳು ನೋಡುಗರ ಗಮನ ಸೆಳೆದವು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಕಲಾವಿದರು ತಮ್ಮ ಪ್ರತಿಭೆಗಳನ್ನು ಆಕರ್ಷಕವಾಗಿ ಆನಾವರಣಗೊಳಿಸಿದರು.


    ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ, ಕಾರ್ಖಾನೆ ಮಾಜಿ ಉದ್ಯೋಗಿ ಎಸ್. ದೊಡ್ಡಣ್ಣ ಕಾರ್ಖಾನೆಯಲ್ಲಿ ತಮ್ಮೊಂದಿಗೆ ವೃತ್ತಿ ಸೇವೆ ಸಲ್ಲಿಸಿದವರು ಹಾಗು ಹೋರಾಟಗಳಲ್ಲಿ ಭಾಗಿಯಾದವರನ್ನು ಸ್ಮರಿಸುವ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
    ಈ ನಡುವೆ ಶತಮಾನೋತ್ಸವ ಯಶಸ್ವಿಗಾಗಿ ತೆರೆಮರೆಯಲ್ಲಿ ಶ್ರಮಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಸಂಜೆ ಕಾರ್ಯಕ್ರಮದಲ್ಲಿ ಹೊರದೇಶ, ಹೊರರಾಜ್ಯ ಹಾಗು ರಾಜ್ಯದ ವಿವಿಧ ಮೂಲೆಗಳಿಂದ ಮತ್ತು ನಗರದ ವಿವಿಧೆಡೆಗಳಿಂದ ಸಾವಿರಾರು ಮಂದಿ ಪಾಲ್ಗೊಂಡಿದ್ದರು.



    ನ.೫ರಂದು ಸಮಾರೋಪ ಸಮಾರಂಭ:
    ಶತಮಾನೋತ್ಸವ ಸಮಾರೋಪ ನ.೫ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗು ರಾಜ್ಯ ಸಚಿವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

No comments:

Post a Comment