Friday, November 3, 2023

ವಿಐಎಸ್‌ಎಲ್ ಶತಮಾನೋತ್ಸವ ಯಶಸ್ವಿಗಾಗಿ ಭದ್ರಾ ಮಾತೆ ಆರಾಧನೆ

ವಿಶೇಷವಾಗಿ ಭದ್ರಾರತಿ ಮೂಲಕ ಪ್ರಾರ್ಥನೆ


ಭದ್ರಾವತಿ ನಗರದಲ್ಲಿ ೨ ದಿನಗಳ ಕಾಲ ಆಯೋಜಿಸಲಾಗಿರುವ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಹಳೇಸೇತುವೆ ಬಳಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಭದ್ರಾರತಿ ನಡೆಯಿತು. ಇದಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಜ್ಯೋತಿಯನ್ನು ಕಾರ್ಮಿಕರಿಗೆ ಹಸ್ತಾಂತರಿಸಿದರು.
    ಭದ್ರಾವತಿ: ನಗರದಲ್ಲಿ ೨ ದಿನಗಳ ಕಾಲ ಆಯೋಜಿಸಲಾಗಿರುವ ವಿಐಎಸ್‌ಎಲ್ ಶತಮಾನೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಹಳೇಸೇತುವೆ ಬಳಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಭದ್ರಾರತಿ ನಡೆಯಿತು.
    ಶತಮಾನೋತ್ಸವ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಬೇಕೆಂಬ ಆಶಯದೊಂದಿಗೆ ವಿಶೇಷವಾಗಿ ಭದ್ರಾ ಮಾತೆಗೆ ಭದ್ರಾರತಿ ಮೂಲಕ ಪ್ರಾರ್ಥಿಸಲಾಯಿತು. ಇದಕ್ಕೂ ಮೊದಲು ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ವಿಶೇಷ ಪೂಜೆ ಸಲ್ಲಿಸಿ ಶತಮಾನೋತ್ಸವ ಆಚರಣಾ ಸಮಿತಿ ಮಾರ್ಗದರ್ಶರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಸಮಿತಿ ಅಧ್ಯಕ್ಷ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಜ್ಯೋತಿಯನ್ನು ತರುವ ಮೂಲಕ ದೇವಸ್ಥಾನದ ಮುಂಭಾಗದಲ್ಲಿ ಕಾರ್ಮಿಕರಿಗೆ ಹಸ್ತಾಂತರಿಸಿದರು.
    ನಂತರ ಜ್ಯೋತಿ ಪ್ರಮುಖ ರಸ್ತೆಗಳಲ್ಲಿ ಭದ್ರಾನದಿಯಲ್ಲಿರುವ ಸಂಗಮೇಶ್ವರ ದೇವಸ್ಥಾನ ತಲುಪಿತು. ಬುಟ್ಟಿ ದೀಪ ಹಾರಿ ಬಿಡುವ ಜೊತೆಗೆ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ನಡೆಯಿತು.
    ನಗರಸಭೆ ಪೌರಾಯುಕ್ತ ಮನುಕುಮಾರ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹಾಗು ಪದಾಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಗಣ್ಯರು, ಶತಮಾನೋತ್ಸವ ಆಚರಣಾ ಸಮಿತಿ ಸದಸ್ಯರುಗಳು ಹಾಗು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.

No comments:

Post a Comment