ಭದ್ರಾವತಿ : ನಗರದ ಜನ್ನಾಪುರ ಬಂಟರ ಭವನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಇಎಸ್‌ಐ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ : ನಗರದ ಜನ್ನಾಪುರ ಬಂಟರ ಭವನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಇಎಸ್‌ಐ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಚಿಕಿತ್ಸಾಲಯದ ಮುಂಭಾಗ ಮಣ್ಣಿನ ರಸ್ತೆ ಇದ್ದು, ಮಲಗಾಲದಲ್ಲಿ ಮಣ್ಣಿನ ರಸ್ತೆಯಿಂದಾಗಿ ಚಿಕಿತ್ಸಾಲಯಕ್ಕೆ ಬರುವ ರೋಗಿಗಳಿಗೆ ಮತ್ತು ಕಾರ್ಮಿಕರಿಗೆ ಓಡಾಡಲು ಹಾಗು ವಾಹನಗಳನ್ನು ನಿಲುಗಡೆ ಮಾಡಲು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಚಿಕಿತ್ಸಾಲಯ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ಕೋರಲಾಗಿದೆ.
ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ನಗರಸಭೆ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವಂತೆ ಪೌರಾಯುಕ್ತರಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಚಿಕಿತ್ಸಾಯದ ವೈದ್ಯರಾದ ಡಾ. ದಿವ್ಯ, ಡಾ. ಈಶ್ವರಪ್ಪ, ಡಾ. ಸುಹಾಸ್, ಎಂ.ಎಚ್ ವಿಶಾಲ್, ಕೀರ್ಯಾ ನಾಯ್ಕ, ಜಿ.ಎನ್ ಲವ ಹಾಗು ಮಂಜುನಾಥ್ ಮತ್ತು ಸಿಬ್ಬಂದಿ ವರ್ಗದವರು ಪೌರಾಯುಕ್ತ ಎಚ್.ಎಂ ಮನುಕುಮಾರ್‌ರವರಿಗೆ ಮನವಿ ಸಲ್ಲಿಸಿದರು.
No comments:
Post a Comment