ರುದ್ರಭೂಮಿಯಲ್ಲಿ ಕಾಗೆಗೆ ಎಡೆ ಇಡುವ ಕಟ್ಟೆ, ಆಸನಗಳ ಉದ್ಘಾಟನೆ
ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಭಾವಸಾರ ಕೋ ಆಪರೇಟಿವ್ ಸೊಸೈಟಿ ಅಂಗ ಸಂಸ್ಥೆಯಾದ ಭಾವಸಾರ ವಿಷನ್ ಇಂಡಿಯಾ ವತಿಯಿಂದ ಭದ್ರಾವತಿ ನಗರದ ಹುತ್ತಾ ಕಾಲೋನಿ ಹಾಗೂ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕೈಗೊಂಡಿರುವ ಕಾಗೆಗೆ ಎಡೆ ಇಡುವ ಕಟ್ಟೆ ಹಾಗೂ ಕಾಂಕ್ರೀಟ್ ಆಸನಗಳ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಭದ್ರಾವತಿ : ಸಮಾಜಮುಖಿ ಕಾರ್ಯಗಳಿಗೆ ನಗರಸಭೆ ಆಡಳಿತ ಹೆಚ್ಚಿನ ಸಹಕಾರ ನೀಡಲಿದೆ ಎಂದು ಪೌರಾಯುಕ್ತ ಮನುಕುಮಾರ್ ಹೇಳಿದರು.
ಅವರು ಮಂಗಳವಾರ ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಭಾವಸಾರ ಕೋ ಆಪರೇಟಿವ್ ಸೊಸೈಟಿ ಅಂಗ ಸಂಸ್ಥೆಯಾದ ಭಾವಸಾರ ವಿಷನ್ ಇಂಡಿಯಾ ವತಿಯಿಂದ ನಗರದ ಹುತ್ತಾ ಕಾಲೋನಿ ಹಾಗೂ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕೈಗೊಂಡಿರುವ ಕಾಗೆಗೆ ಎಡೆ ಇಡುವ ಕಟ್ಟೆ ಹಾಗೂ ಕಾಂಕ್ರೀಟ್ ಆಸನಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಶೇಷವಾಗಿ ರುದ್ರಭೂಮಿ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯವಾಗಿದ್ದು, ಸಮಾಜದಲ್ಲಿ ಮಾದರಿ ಕಾರ್ಯ ಇದಾಗಿದೆ. ಈ ರೀತಿಯ ಸಮಾಜಮುಖಿ ಕಾರ್ಯಗಳಿಗೆ ಸಂಪೂರ್ಣ ಸಹಕಾರವಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಬಿವಿಐ ಸಂಸ್ಥಾಪಕ ಸಂಯೋಜಕ ಗಜೇಂದ್ರನಾಥ ಮಾಳೋದೆ, ರಾಷ್ಟ್ರೀಯ ಕಾರ್ಯದರ್ಶಿ ಸಚಿನ್ ಸಾಕ್ರೆ, ಏರಿಯಾ ೧೦೩ರ ಗೌರ್‍ನರ್ ಸುರೇಶ್ ಶೇರ್‌ಖರ್, ಹಿರಿಯ ಮುತ್ಸದಿಗಳಾದ ಅಶೋಕ್ ಡೋಯಿಜೋಡೆ, ದಿನಕರ್ ಡೋಯಿಜೋಡೆ, ಬದ್ರಿನಾಥ್ ಉತ್ತರಕರ್, ಸತೀಶ್ ಕುಮಾರ್ ಉತ್ತರ್‌ಕರ್, ಮುರಳಿಧರ್ ಉತ್ತರ್‌ಕರ್, ನರೇಂದ್ರ ಡೋಯಿಜೋಡೆ, ರಾಮ್‌ರಾವ್ ಡೋಯಿಜೋಡೆ , ಹನುಮಂತ್‌ರಾವ್ ಗುಜ್ಜರ್, ಅಂಬಾಜಿರಾವ್ ರಂಗದೊಳ್, ವಿಠಲನಾಥ್ ತೇಲ್ಕರ್, ರಾಘವೇಂದ್ರ ಚಿಕ್ಕೋಡೆ , ಹಿರಿಯ ಪರ್ತಕ ಕೆ.ಎನ್ ರವೀಂದ್ರನಾಥ್(ಬ್ರದರ್) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
ಭಾವಸಾರ ವಿಜನ್ ಇಂಡಿಯಾ ಏರಿಯಾ ೧೦೩ರ ತಾಲೂಕು ಅಧ್ಯಕ್ಷ ರಾಕೇಶ್ ಡೋಯಿಜೋಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿವಿಐ ಕಾರ್ಯದರ್ಶಿ ಆನಂದ್ ಉತ್ತರಕರ್ ಸ್ವಾಗತಿಸಿದರು. ಶಿಲ್ಪಾ ಜಗದೀಶ್ ನಿರೂಪಿಸಿದರು.
No comments:
Post a Comment