ಡಾ. ಸಿ.ಕೆ ರಮೇಶ್ ಕುಲಸಚಿವ(ಮೌಲ್ಯಮಾಪನ) ಹುದ್ದೆಗೆ ನಿಯೋಜನೆ
ಡಾ.ಸಿ.ಕೆ ರಮೇಶ್
ಭದ್ರಾವತಿ: ನಗರದ ಬೊಮ್ಮನಕಟ್ಟೆ ಸರ್.ಎಂ ವಿಶ್ವೇಶ್ವರಾಯ ಸರ್ಕಾರಿ ವಿಜ್ಞಾನ ಕಾಲೇಜಿನ ಹಳೇಯ ವಿದ್ಯಾರ್ಥಿ, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕ ಡಾ. ಸಿ.ಕೆ ರಮೇಶ್ ಅವರನ್ನು ಸರ್ಕಾರ ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಸಚಿವ(ಮೌಲ್ಯಮಾಪನ) ಹುದ್ದೆಗೆ ನಿಯೋಜನೆಗೊಳಿಸಿ ಆದೇಶ ಹೊರಡಿಸಿದೆ.
ಕುಲಸಚಿವರಾಗಿದ್ದ ಡಾ. ಕೆ. ಶಿವಶಂಕರ್ ಅವರ ಸೇವೆಯನ್ನು ಮಾತೃ ವಿಶ್ವವಿದ್ಯಾಲಯ/ವಿಭಾಗಕ್ಕೆ ಹಿಂದಿರುಗಿಸಲಾಗಿದ್ದು, ಸರ್ಕಾರ ಡಾ. ಸಿ.ಕೆ ರಮೇಶ್ ಅವರನ್ನು ನೇಮಕಗೊಳಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಡಾ.ಸಿ.ಕೆ ರಮೇಶ್ ಅವರನ್ನು ಕುಲಸಚಿವ ಹುದ್ದೆಗೆ ಸರ್ಕಾರ ನೇಮಕಗೊಳಿಸಿರುವುದಕ್ಕೆ ಸರ್.ಎಂ ವಿಶ್ವೇಶ್ವರಾಯ ಸರ್ಕಾರಿ ವಿಜ್ಞಾನ ಕಾಲೇಜಿನ ಹಳೇಯ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಅಭಿನಂದನೆಗಳು ರಮೇಶ್. ಸರ್ ಎಂ ವಿ ಕಾಲೇಜ್ ನ ನಿಮ್ಮ ಒಂದು ವರ್ಷ ಹಿರಿಯ ಸಹಪಾಠಿ ಗಳೆಲ್ಲರ ಪರವಾಗಿ ಶುಭಾಶಯಗಳು. ನಮಗೆಲ್ಲಾ ಹೆಮ್ಮೆ.
ReplyDelete