ಮಾದರಿಯಾದ ಕುಟುಂಬ ವರ್ಗದವರು, ಸ್ನೇಹಿತರು
ಭದ್ರಾವತಿ ನಗರಸಭೆ ವಾರ್ಡ್ ನಂ.೩೧ರ ವ್ಯಾಪ್ತಿಯ ಜಿಂಕ್‌ಲೈನ್ ನಿವಾಸಿ, ಯುವ ಮುಖಂಡ ಮಹೇಶ್‌ರವರು ಕಳೆದ ೧ ವರ್ಷದ ಹಿಂದೆ ನಿಧನ ಹೊಂದಿದ್ದು, ಇವರ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ಕುಟುಂಬ ವರ್ಗದವರು ಹಾಗು ಸ್ನೇಹಿತರು ಸಾಮಾಜಿಕ ಕಾರ್ಯಗಳನ್ನು ಆಯೋಜಿಸುವ ಮೂಲಕ ಮಾದರಿ ಯಾಗಿದ್ದಾರೆ.
ಭದ್ರಾವತಿ : ಕಳೆದ ೧ ವರ್ಷದ ಹಿಂದೆ ನಿಧನ ಹೊಂದಿದ ವ್ಯಕ್ತಿಯೊಬ್ಬರ ಪುಣ್ಯಸ್ಮರಣೆಯನ್ನು ಕುಟುಂಬ ವರ್ಗದವರು ಹಾಗು ಸ್ನೇಹಿತರು ವಿಶಿಷ್ಟವಾಗಿ ಆಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರಸಭೆ ವಾರ್ಡ್ ನಂ.೩೧ರ ವ್ಯಾಪ್ತಿಯ ಜಿಂಕ್‌ಲೈನ್ ನಿವಾಸಿ, ಯುವ ಮುಖಂಡ ಮಹೇಶ್‌ರವರು ಕಳೆದ ೧ ವರ್ಷದ ಹಿಂದೆ ನಿಧನ ಹೊಂದಿದ್ದು, ಇವರ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ಕುಟುಂಬ ವರ್ಗದವರು ಹಾಗು ಸ್ನೇಹಿತರು ಸಾಮಾಜಿಕ ಕಾರ್ಯಗಳನ್ನು ಆಯೋಜಿಸುವ ಮೂಲಕ ಮಾದರಿ ಯಾಗಿದ್ದಾರೆ.
ಹುತ್ತಾಕಾಲೋನಿ ಜಿಂಕ್‌ಲೈನ್ ರಂಗಮಂಟಪದ ಬಳಿ ಶುಕ್ರವಾರ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಹಾಗು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಿವಮೊಗ್ಗ ಪ್ರಿಯಾಂಕ ಆಸ್ಪತ್ರೆ ವೈದ್ಯ ಡಾ. ನಿತೀನ್ ನೇತೃತ್ವದ ತಂಡ ಆರೋಗ್ಯ ತಪಾಸಣೆ ಹಾಗು ಐ ದೃಷ್ಠಿ ಆಸ್ಪತ್ರೆ ಮುರಳಿ ಪಿ.ಆರ್.ಓ ನೇತೃತ್ವದ ತಂಡದಿಂದ ಕಣ್ಣಿನ ತಪಾಸಣೆ ಹಾಗು ರೋಟರಿ ರಕ್ತನಿಧಿವತಿಯಿಂದ ರಕ್ತದಾನ ಶಿಬಿರ ನಡೆಯಿತು.
ಭಂಡಾರಹಳ್ಳಿ, ಜಿಂಕ್‌ಲೈನ್, ಹುತ್ತಾಕಾಲೋನಿ, ವೇಲೂರುಶೆಡ್, ಜನ್ನಾಪುರ ಸೇರಿದಂತೆ ಸುತ್ತಮುತ್ತಲ ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಪ್ರಮುಖರಾದ ವಿ. ಶ್ರೀನಿವಾಸ್, ಎಂ. ದಿಲೀಪ್, ಪ್ರವೀಣ್, ವಿಲ್ಸನ್, ಎಚ್. ರವಿಕುಮಾರ್, ಅನಂತರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment