ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವ ಆಯುರ್ವೇದ ತಜ್ಞ ಚಿಕಿತ್ಸಾ ಕೇಂದ್ರ 'ಆಯುಷ್' ಭಾನುವಾರ ಕಾರ್ಯಾರಂಭಗೊಂಡಿತು.
ಭದ್ರಾವತಿ: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವ ಆಯುರ್ವೇದ ತಜ್ಞ ಚಿಕಿತ್ಸಾ ಕೇಂದ್ರ 'ಆಯುಷ್' ಕಾರ್ಯಾರಂಭಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಭಾನುವಾರ ಚಾಲನೆ ನೀಡಿದರು.
ಆಯುಷ್ ವೈದ್ಯರಾದ ಡಾ. ಎಂ. ಅರುಣ ಕುಮಾರಿ, ಡಾ. ದಿವ್ಯ, ಡಾ. ಟಿ.ಸಿ ವಿನಯ್, ಪ್ರಶಾಂತ್, ಡಾ. ಸಿ. ವಿಕ್ರಮ್, ಡಾ. ಎಚ್.ಎಸ್ ಸತೀಶ್, ಡಾ. ಚಂದ್ರಶೇಖರ್ ವೈ ನಾಗನೂರ್ ಒಟ್ಟು ೭ ಜನರ ತಂಡ ಚಿಕಿತ್ಸಾ ಕೇಂದ್ರ ಆರಂಭಿಸಿದ್ದಾರೆ.
ಗಾಂಧಿನಗರದ ೨ನೇ ಅಡ್ಡ ರಸ್ತೆಯಲ್ಲಿರುವ ಭದ್ರಾ ನರ್ಸಿಂಗ್ ಹೋಂ ಪಕ್ಕದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಆಯುಷಿ ತಜ್ಞ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ವಿಚಾರಣೆ ಹಾಗು ಔಷಧಿ ವಿತರಣೆ ಕೊಠಡಿ, ವೈದ್ಯರ ಕೊಠಡಿ, ತಪಾಸಣಾ ಹಾಗು ಚಿಕಿತ್ಸಾ ಕೊಠಡಿಗಳನ್ನು ಒಳಗೊಂಡಿದೆ.
ಕಾರ್ಯ ಚಿಕಿತ್ಸಾ(ಜನರಲ್ ಮೆಡಿಸಿನ್)ವಿಭಾಗ, ಮೂಳೆ ಮತ್ತು ಸಂಧಿರೋಗ ಚಿಕಿತ್ಸಾ ವಿಭಾಗ, ನರ ಮತ್ತು ಮನೋರೋಗ ಚಿಕಿತ್ಸಾ ವಿಭಾಗ, ಚರ್ಮ ಮತ್ತು ಸೌಂದರ್ಯ ಚಿಕಿತ್ಸಾ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ಕಣ್ಣು, ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗ ಕಾರ್ಯ ನಿರ್ವಹಿಸಲಿವೆ.
ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ನಗರಸಭಾ ಸದಸ್ಯ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಜಗನ್ನಾಥ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕಿ ಅಮೂಲ್ಯ, ನರಸಿಂಹಮೂರ್ತಿ, ಭದ್ರಗಿರಿ ದೇವಸ್ಥಾನ ಸಮಿತಿ ಪ್ರಮುಖರಾದ ಎ. ಚಂದ್ರಘೋಷನ್, ಮಂಜುನಾಥ್, ನಾಗರಾಜ್, ಸೋಮ ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಂಡು ಶುಭಾ ಹಾರೈಸಿದರು.
No comments:
Post a Comment