ಡಾ. ವಿದ್ಯಾಶಂಕರ್
ಭದ್ರಾವತಿ : ಗುಜರಾತ್ ಅಹಮದಾಬಾದ್‌ನಲ್ಲಿ ನಡೆದ ವಿಜ್ಞಾನ ಭಾರತೀಯ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವಿದ್ಯಾಶಂಕರ್ ಅವರು ಮಂಡಿಸಿದ 'ಭಾರತೀಯ ವೇದಗಳಲ್ಲಿ ತಂತ್ರಜ್ಞಾನ' ಎಂಬ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿ ಲಭಿಸಿದೆ.
ಮೂಲತಃ ನಗರದ ನಿವಾಸಿಯಾಗಿರುವ ಡಾ. ವಿದ್ಯಾಶಂಕರ್ ಅವರು ಈಗಾಗಲೇ ರಾಷ್ಟ್ರ ಹಾಗು ರಾಜ್ಯಮಟ್ಟದ ಹಲವಾರು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ವಿಶೇಷವಾಗಿ 'ಭಾರತೀಯ ವೇದಗಳಲ್ಲಿ ತಂತ್ರಜ್ಞಾನ' ಎಂಬ ಪ್ರಬಂಧ ಮಂಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರನ್ನು ಕಾಲೇಜಿನ ಉಪನ್ಯಾಸಕ ವೃಂದದವರು, ನಗರದ ಗಣ್ಯರು ಅಭಿನಂದಿಸಿದ್ದಾರೆ.
No comments:
Post a Comment