ಭದ್ರಾವತಿ : ಟೆಲಿಗ್ರಾಂ ಆಪ್ ಮೂಲಕ ವ್ಯಕ್ತಿಯೊಬ್ಬರಿಗೆ ತೊಡಗಿಸಿದ ಬಂಡವಾಳಕ್ಕೆ ಶೇ.೩೦ ಕಮಿಷನ್ ಹಾಗು ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ನಂಬಿಸಿ ಸುಮಾರು ೨೧.೯೦ ಲಕ್ಷಾಂತರ ರು. ಪಡೆದು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಳೇನಗರ ಪೊಲೀಸ್ ಠಾಣೆಯಲ್ಲಿ ಅ.೧೫ರಂದು ಪ್ರಕರಣ ದಾಖಲಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿರುವ, ಕೃಷಿ ಕೆಲಸ ಮಾಡಿಕೊಂಡಿರುವ ವ್ಯಕ್ತಿಯೊಬ್ಬರು ಐಸಿಐಸಿಐ ಬ್ಯಾಂಕ್‌ನಲ್ಲಿ ಹೊಂದಿರುವ ತಮ್ಮ ಸ್ವಂತ ಬ್ಯಾಂಕ್ ಖಾತೆ ಮತ್ತು ಇದೆ ಬ್ಯಾಂಕ್‌ನಲ್ಲಿ ಮಗಳ ಹೆಸರಿನಲ್ಲಿ ಹೊಂದಿರುವ ಜಂಟಿ ಬ್ಯಾಂಕ್ ಖಾತೆಯಲ್ಲಿನ ಹಣ ಕಳೆದುಕೊಂಡಿದ್ದಾರೆ.
ಪ್ರಕರಣದ ವಿವರ:
ಆ.೨೮ರಂದು ವಾಟ್ಸಪ್‌ನಲ್ಲಿ ಸಾರಿಕಾ ಎಂಬ ಹೆಸರಿನಿಂದ ವ್ಯಕ್ತಿಯೊಬ್ಬರಿಗೆ ಮೆಸೇಜ್ ಬಂದಿದ್ದು, `ನೀವು ಟೆಲಿಗ್ರಾಂ ಆಪ್‌ನಲ್ಲಿನ ಟ್ರಾವೆಲ್ಸ್ ಪಾರ್ಟರ್ನರ್ ಇಂಡಿಯಾ ೭೨೯೨ ಮತ್ತು ೯೧ ಕ್ಲಬ್ ಸರ್ವಿಸ್ ೧೬೯ ಎಂಬ ಗ್ರೂಪ್ ಜಾಯಿನ್ ಆಗಿ ಹಾಗು ನೀವು ಟ್ರಾವೆಲ್ಸ್ ಗ್ರೂಪ್ ಬಂಡವಾಳ ತೊಡಗಿಸಿದರೆ ನಿಮ್ಮ ಬಂಡವಾಳಕ್ಕೆ ಶೇ.೩೦ರಷ್ಟು ಕಮಿಷನ್ ಮತ್ತು ನಿಮಗೆ ಪಾರ್ಟ್ ಟೈಮ್ ಕೆಲಸ' ಎಂದು ಮೆಸೇಜ್‌ನಲ್ಲಿ ತಿಳಿಸಲಾಗಿದೆ.
ಈ ಟೆಲಿಗ್ರಾಂ ಗ್ರೂಪ್‌ನಲ್ಲಿ ೪೭ ಜನರಿದ್ದು, ಇದರಲ್ಲಿ ಸಾರಿಕಾ ಏಜೆಂಟ್ ಮತ್ತು ದಿವ್ಯ ದರ್ಶನಿ ಎಂಬುವವರು ಮತ್ತು ಗ್ರೂಪ್‌ನ ಆಡ್ಮಿನ್ ಅಮ್ರಿತ್ ಪಾಟೀಲ್ ಎಂಬುವವರು ಟೆಲಿಗ್ರಾಂನಲ್ಲಿ ಮೆಸೇಜ್ ಮಾಡಿ ನೀವು ಬಂಡವಾಳ ತೊಡಗಿಸಿ ಎಂದು ತಿಳಿಸಿದ್ದಾರೆ.
ಕಮಿಷನ್ ಹಾಗು ಪಾರ್ಟ್ ಟೈಮ್ ಕೆಲಸದ ಆಸೆಗೆ ಬಿದ್ದು, ತಮ್ಮ ಸ್ವಂತ ಬ್ಯಾಂಕ್ ಖಾತೆ ಮತ್ತು ಇದೆ ಮಗಳ ಹೆಸರಿನಲ್ಲಿ ಹೊಂದಿರುವ ಜಂಟಿ ಬ್ಯಾಂಕ್ ಖಾತೆಯಲ್ಲಿನ ಹಣ ಪೋನ್ ಪೇ, ನೆಟ್ ಬ್ಯಾಂಕ್ ಹಾಗು ಚೆಕ್ ಮೂಲಕ ಒಟ್ಟು ೨೧,೯೦,೫೯೫ ರು. ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಳೇನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
No comments:
Post a Comment