ಭದ್ರಾವತಿ ತಾಲೂಕಿನ ಕಾಗೇಕೊಡಮಗ್ಗಿ ನೀರು ಬಳಕೆದಾರರ ಸಹಕಾರ ಸಂಘ ಈ ಬಾರಿ ೨ನೇ ಸ್ಥಾನದೊಂದಿಗೆ ೨೦೨೩ನೇ ಸಾಲಿನ ರಾಷ್ಟ್ರೀಯ ಜಲ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಸಂಘದ ಅಧ್ಯಕ್ಷ ಸೈಯದ್ ಅಬಿದ್ ಮತ್ತು ಕಾರ್ಯದರ್ಶಿ ರವಿಕುಮಾರ್ ಪ್ರಶಸ್ತಿ ಸ್ವೀಕರಿಸಿರುವುದು.
ಭದ್ರಾವತಿ: ತಾಲೂಕಿನ ಕಾಗೇಕೊಡಮಗ್ಗಿ ನೀರು ಬಳಕೆದಾರರ ಸಹಕಾರ ಸಂಘ ಈ ಬಾರಿ ೨ನೇ ಸ್ಥಾನದೊಂದಿಗೆ ೨೦೨೩ನೇ ಸಾಲಿನ ರಾಷ್ಟ್ರೀಯ ಜಲ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.
ನೀರು ಬಳಕೆದಾರರ ಸಹಕಾರ ಸಂಘ ಉತ್ತಮ ಕಾರ್ಯನಿರ್ವಹಣೆಯೊಂದಿಗೆ ನೀರು ಸಂರಕ್ಷಣೆ ಕುರಿತು ರೈತರು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಮಾದರಿಯಾಗಿದೆ. ಸಂಘದ ಕಾರ್ಯ ವೈಖರಿ ಕುರಿತು ಹಲವು ಬಾರಿ ಪ್ರಶಂಸೆಗಳು ವ್ಯಕ್ತವಾಗಿದ್ದವು. ಇದೀಗ ೨ನೇ ಸ್ಥಾನದೊಂದಿಗೆ ಪುರಸ್ಕಾರಕ್ಕೆ ಪಾತ್ರವಾಗಿದೆ.
ರಾಷ್ಟ್ರಪತಿಯವರಿಂದ ಸಂಘದ ಅಧ್ಯಕ್ಷ ಸೈಯದ್ ಅಬಿದ್ ಹಾಗು ಕಾರ್ಯದರ್ಶಿ ರವಿಕುಮಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬುಧವಾರ ಪ್ರಶಸ್ತಿಯೊಂದಿಗೆ ನಗರಕ್ಕೆ ಆಗಮಿಸಿದ ಇಬ್ಬರನ್ನು ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಗ್ರಾಮಸ್ಥರು, ಸ್ಥಳೀಯ ಮುಖಂಡರು ಸನ್ಮಾನಿಸಿ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಫೀರ್ ಷರೀಫ್, ಅಯುಬ್ ಖಾನ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
No comments:
Post a Comment