ಭದ್ರಾವತಿ: ನಗರದ ಜನ್ನಾಪುರ ಗಣೇಶ್ ಕಾಲೋನಿ, ಹಾಲಪ್ಪ ಶೆಡ್‌ನಲ್ಲಿ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಅ.೨೦ ಮತ್ತು ೨೧ರಂದು ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಜರುಗಲಿವೆ.
ಅ.೨೦ರಂದು ಸಂಜೆ ೫ ಗಂಟೆಗೆ ಮಂಗಳವಾದ್ಯದೊಂದಿಗೆ ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯವರ ವಿಗ್ರಹಗಳನ್ನು ಹಾಲಪ್ಪಶೆಡ್ ಮುಖಾಂತರ ಸಾಗಿ ಮಲ್ಲೇಶ್ವರ ಸಭಾಭವನ, ಗಣಪತಿ ದೇವಸ್ಥಾನ, ಶ್ರೀರಾಮ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ, ಕುರುಮಾರಿಯಮ್ಮ ದೇವಸ್ಥಾನ, ಕೂಲಿಬ್ಲಾಕ್ ಶೆಡ್, ಮಾರಿಯಮ್ಮ ದೇವಸ್ಥಾನ, ಬುಳ್ಳಾಪುರ ಮುನೇಶ್ವರ ದೇವಾಲಯ ಮತ್ತು ಸಿದ್ದಾಪುರ ಚೌಡೇಶ್ವರಿ ದೇವಾಲಯದ ಮುಖಾಂತರ ರಾಜಬೀದಿಗಳಲ್ಲಿ ಕರಿವಲಂ(ಗಡಿಪೂಜೆ) ಮಾಡಿ ಬಂದು ದೇವಸ್ಥಾನ ಸೇರುವ ಕಾರ್ಯಕ್ರಮ ಜರುಗಲಿದೆ.
೨೧ರಂದು ಬೆಳಗಿನ ಜಾವ ಗಣಹೋಮ, ಆದಿವಾಸಿ ಹೋಮ, ಕಲಾ ಹೋಮ ನಡೆಯಲಿದ್ದು, ೭.೩೦ಕ್ಕೆ ಮಲ್ಲೇಶ್ವರ ಸಭಾಭವನ ಪಕ್ಕದ ಶ್ರೀ ಈಶ್ವರ ದೇವಾಲಯದಿಂದ ಗಂಗೆ ಪೂಜೆಯನ್ನು ೧೦೧ ಗಂಗೆ ತುಂಬಿದ ಕಲಶಗಳನ್ನು ಹೊತ್ತು ತಂದು ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ನಂತರ ಕಲಶದ ನೀರಿನಿಂದ ಅಭಿಷೇಕ ನಡೆಯಲಿದೆ. ಅಮ್ಮನವರಿಗೂ ಹಾಗು ಮುನೇಶ್ವರ ಸ್ವಾಮಿಯವರಿಗೂ ಅಲಂಕಾರ ಮಾಡಿ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
No comments:
Post a Comment